ವಿಶ್ವಸಂಸ್ಥೆ: ತನ್ನ ಉಗ್ರವಾದದ ಮುಖವಾಡವನ್ನು ಬಯಲು ಮಾಡಿದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಬಯಲು ಮಾಡಿದ್ದರಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನ, ವಿಶ್ವಸಂಸ್ಥೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಉತ್ತರಪ್ರದೇಶ ಸಿಎಂ ಯೋಗಿ ಅದಿತ್ಯನಾಥ್‌ ಮತ್ತು ಇತ್ತೀಚೆಗೆ ಅಸ್ಸಾಂನಲ್ಲಿ ಕೈಗೊಂಡ ರಾಷ್ಟ್ರೀಯ ನಾಗರಿಕ ನೋಂದಣಿ ವಿಷಯವನ್ನು ಪ್ರಸ್ತಾಪಿಸಿದೆ. 

ಸುಷ್ಮಾ ಭಾಷಣಕ್ಕೆ ಉತ್ತರ ನೀಡಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ಪ್ರಿತನಿಧಿ ಸಾದ್‌ ವರಾಯಿಚ್‌, ಆರ್‌ಎಸ್‌ಎಸ್‌ ಒಂದು ಬಲಪಂಥೀಯ ಸಂಘಟನೆ ಮತ್ತು ಉಗ್ರವಾದದ ಜನ್ಮಸ್ಥಳ. 

ಅದು ದೇಶಾದ್ಯಂತ ಧರ್ಮದ ಹೆಸರಲ್ಲಿ ಉಗ್ರವಾದವನ್ನು ಬೆಳೆಸುತ್ತಿದೆ ಎಂದು ಕಿಡಿಕಾರಿದ್ದಾರೆ. ಜೊತೆಗೆ ಹಿಂದೂ ಧರ್ಮವನ್ನು ಬಹುವಾಗಿ ಪ್ರತಿಪಾದಿಸುವ ಯೋಗಿ ಆದಿತ್ಯನಾಥ್‌ ದೇಶದ ಅತಿದೊಡ್ಡ ರಾಜ್ಯದ ಮುಖವಾಡವಾಗಿದ್ದಾರೆ ಎಂದು ದೂರಿದೆ. ಇನ್ನು ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿ ಹೆಸರಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರನ್ನು ದೇಶದಿಂದ ಹೊರಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.