ರೈಲ್ವೇ ಪರೀಕ್ಷೆ ಬರೀತಿರಾ?: ಅಂಕ ಹಂಚಿಕೆ ಹೀಗೆ ಆಗುತ್ತೆ!
ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷೆ
ಸಹಾಯಕ ಲೊಕೊ ಪೈಲೆಟ್, ತಾಂತ್ರಿಕ ನೇಮಕಾತಿ
ಪರೀಕ್ಷಾ ಅಂಕ ಹಂಚಿಕೆ ವಿಧಾನದಲ್ಲಿ ಬದಲಾವಣೆ
ವಿವಿಧ ವಿಷಯಗಳಿಗೆ ನಿರ್ದಿಷ್ಟ ಅಂಕ ವಿಧಾನ
ನವದೆಹಲಿ(ಜು.26): ರೈಲ್ವೇ ನೇಮಕಾತಿ ಮಂಡಳಿ, ಸಹಾಯಕ ಲೊಕೊ ಪೈಲಟ್ ಮತ್ತು ತಾಂತ್ರಿಕ ನೇಮಕಾತಿ ಹಂತ-1ರ ಪರೀಕ್ಷೆಯ ಅಂಕ ಹಂಚಿಕೆ ವಿಧಾನವನ್ನು ಬಿಡುಗಡೆ ಮಾಡಿದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಲ್ಲಿ ವಿವಿಧ ಅಧ್ಯಯನ ವಿಷಯಗಳ ಮೇಲೆ ಪ್ರಶ್ನೆ ಪತ್ರಿಕೆ ಸಿದ್ದಪಡಿಸಲಾಗುತ್ತದೆ. ಪ್ರಮುಖವಾಗಿ ಗಣಿತ, ಸಾಮಾನ್ಯ ಜ್ಞಾನ, ಸಾಮಾನ್ಯ ವಿಜ್ಞಾನ, ಪ್ರಚಲಿತ ವಿದ್ಯಮಾನಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಒಟ್ಟು 75 ಅಂಕಗಳ ಪರೀಕ್ಷೆಯಲ್ಲಿ ಈ ಕೆಳಕಂಡಂತೆ ಅಂಕಗಳನ್ನು ಹಂಚಿಕೆ ಮಾಡಲಾಗುವುದು ಎಂದು ರೈಲ್ವೇ ನೇಮಕಾತಿ ಮಂಡಳಿ ತಿಳಿಸಿದೆ.
ಗಣಿತ-20
ಸಾಮಾನ್ಯ ಜ್ಞಾನ-25
ಸಾಮಾನ್ಯ ವಿಜ್ಞಾನ-20
ಪ್ರಚಲಿತ ವಿದ್ಯಮಾನ-10
ಇದೇ ವೇಳೆ ಇದೇ ಮಾದರಿಯನ್ನು ಕಡ್ಡಾಯಗೊಳಿಸುವ ಆಲೋಚನೆ ಇಲ್ಲ ಎಂದು ಹೇಳಿರುವ ರೈಲ್ವೇ ನೇಮಕಾತಿ ಮಂಡಳಿ, ಇದರಲ್ಲಿ ಬದಲಾವಣೆಯೂ ಆಗಬಹುದು ಎಂದು ಸ್ಪಷ್ಟಪಡಿಸಿದೆ.