ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ; ಒಂದೇ ಕುಟುಂಬದ ನಾಲ್ವರು ಸಾವು..!

Road Accident 4 People Died in Bellary
Highlights

ಬೀದರ್ ಜಿಲ್ಲೆ ಬಲ್ಕಿ ತಾಲೂಕಿನ ಚಳಕಾಪುರ ಗ್ರಾಮದ ಡಾ. ಸಂತೋಷ್ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಬ್ರಿಡ್ಜ್'ಗೆ ಕಾರು ಅಪ್ಪಳಿಸಿದ ಪರಿಣಾಮ ಕಾರಿನಲ್ಲಿದ್ದ ಡಾ. ಸಂತೋಷ, ಡಾ. ಅರ್ಚನ, ಸಿದ್ದರಾಮಪ್ಪ, ಹಾಗೂ ಮಗು ಲಕ್ಷ್ಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬಳ್ಳಾರಿ(ಏ.13): ಇಂದು ಮುಂಜಾನೆ ಜಾವ ಬ್ರಿಡ್ಜ್'ಗೆ ಕಾರು ಅಪ್ಪಳಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮಂದಿ ಮೃತಪಟ್ಟಿದ್ದಾರೆ. ಬಳ್ಳಾರಿಯ ಸಿರಗುಪ್ಪ ರಸ್ತೆಯ ಭಾಗ್ಯನಗರ ಬಳಿ ಈ ಅವಘಡ ಸಂಭವಿಸಿದೆ.

ಬೀದರ್ ಜಿಲ್ಲೆ ಬಲ್ಕಿ ತಾಲೂಕಿನ ಚಳಕಾಪುರ ಗ್ರಾಮದ ಡಾ. ಸಂತೋಷ್ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಬ್ರಿಡ್ಜ್'ಗೆ ಕಾರು ಅಪ್ಪಳಿಸಿದ ಪರಿಣಾಮ ಕಾರಿನಲ್ಲಿದ್ದ ಡಾ. ಸಂತೋಷ, ಡಾ. ಅರ್ಚನ, ಸಿದ್ದರಾಮಪ್ಪ, ಹಾಗೂ ಮಗು ಲಕ್ಷ್ಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಯಾಳುಗಳನ್ನು ವಿಮ್ಸ್ ಆಸ್ಫತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ಎಸ್ಪಿ ಅರುಣ್ ರಂಗರಾಜನ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

loader