ನವದೆಹಲಿ(ಫೆ.02): ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಬಿಐ ನೂತನ ನಿರ್ದೇಶಕರಾಗಿ ರಿಶಿ ಕುಮಾರ್ ಶುಕ್ಲಾ ಅವರನ್ನು ನೇಮಕ ಮಾಡಲಾಗಿದೆ.

ಮಧ್ಯಪ್ರದೇಶದ ಪೊಲೀಸ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ರಿಶಿ ಕುಮರ್ ಶುಕ್ಲಾ, 1983ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಹಾಗೂ ಕಾಂಗ್ರೆಸ್​ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ಡಿಎಸ್​ಪಿಇ ಆಯ್ಕೆ ಸಮಿತಿ ಶುಕ್ಲಾ ಆಯ್ಕೆಯನ್ನು ಅಂತಿಮಗೊಳಿಸಿದೆ.

ಸಿಬಿಐ ನಿರ್ದೇಶಕರ ಸ್ಥಾನಕ್ಕೆ ಸುಮಾರು 30 ಜನ ಹಿರಿಯ ಐಪಿಎಸ್ ಅಧಿಕಾರಿಗಳ ಪಟ್ಟಿ ಸಿದ್ದಪಡಿಸಲಾಗಿತ್ತು. ಆ ಪೈಕಿ ಶುಕ್ಲಾ ಅವರ ಆಯ್ಕೆಯನ್ನು ಅಂತಿಮಗೊಳಸಲಾಯಿತು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಸಿಬಿಐ ನಿರ್ದೇಶಕರಾಗಿದ್ದ ಅಲೋಕ್ ವರ್ಮಾ ಅವರನ್ನು ಹುದ್ದೆಯಿಂದ ವಜಾಗೊಳಿಸಿದ ಪರಿಣಾಮ  ಡಿಎಸ್​ಪಿಇ ಆಯ್ಕೆ ಸಮಿತಿ ಹೊಸ ನಿರ್ದೇಶಕರನ್ನು ನೇಮಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.