Asianet Suvarna News Asianet Suvarna News

ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ ಜಲಪಾತಗಳು..!

ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆ

ಮುಂಗಾರು ಅಬ್ಬರ..ಜಲಪಾತಗಳಿಗೆ ಮರುಜೀವ

ವೀಕೆಂಡ್ ಮಸ್ತಿಗೆ ಕಾಯುತ್ತಿವೆ ಸುಂದರ ತಾಣಗಳು

ಪ್ರಕೃತಿಯ ಸೊಬಗಿನ ಮಧ್ಯೆ ಪ್ರವಾಸಿಗರ ಸಂಭ್ರಮ ಸಡಗರ

ಬೆಂಗಳೂರು(ಜೂ.15): ಸಾಕಪ್ಪಾ ಸಾಕು ಈ ಮಳೆ ಅಂತಾ ಬಹುತೇಕರು ಈ ಮಳೆಗಾಲವನ್ನು ಎಂಜಾಯ್ ಮಾಡದೇ ಕುಳಿತಿದ್ದಾರೆ. ಇದೇ ವೇಳೆ ಕೆಲವು ಪ್ರಕೃತಿ ಪ್ರೀಯರು ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿರುವ ಜಲಪಾತಗಳ ದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ವರುಣನ ಅಬ್ಬರದಿಂದಾಗಿ ರಾಜ್ಯದ ಬಹುತೇಕ ಜಲಪಾತಗಳು ಮೈದುಂಬಿಕೊಂಡಿವೆ.

ಅದರಲ್ಲೂ ಮಲೆನಾಡಿನ ಜಲಪಾತಗಳು ಹಾಲ್ನೊರೆಯಂತೆ ಭೋರ್ಗರೆಯುತ್ತಿವೆ. ಹಾಗಾದರೆ ರಾಜ್ಯದ ಯಾವ್ಯಾವ ಜಲಪಾತಗಳು ಇದೀಗ ಪ್ರವಾಸಿಗರನ್ನು ಆಕರ್ಷಿಸುತ್ತಿವೆ ಎಂಬ ಡಿಟೇಲ್ಸ್ ಇಲ್ಲಿದೆ..