ವಾಷಿಂಗ್ಟನ್ (ಜ. 18): ಅಮೆರಿಕದಲ್ಲೇ ನಿಶ್ಚಿಂತೆಯಿಂದ ಉಳಿಯಲು ಸಹಕಾರಿಯಾಗಲು ಎಚ್-1 ಬಿ ವೀಸಾವನ್ನು ಅತ್ಯಾಕರ್ಷಕಗೊಳಿಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ಬೆನ್ನಲ್ಲೇ, ಎಚ್-1 ಬಿ ವೀಸಾದಡಿ ಅಮೆರಿಕದಲ್ಲಿರುವ ಕೆಲಸಗಾರರನ್ನು ಕಳಪೆ ಸ್ಥಿತಿಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂಬ ಸಂಗತಿ ಇದೀಗ ತಿಳಿದುಬಂದಿದೆ.

ಎಚ್-1 ಬಿ ವೀಸಾ ಪಡೆದವರು ವಾಗ್ದಾಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಚಿಂತಕರ ಚಾವಡಿ ವರದಿ ಪ್ರತಿಪಾದಿಸಿದೆ. ಈ ಹಿನ್ನೆಲೆ ಎಚ್-1 ಬಿ ವೀಸಾದಡಿ ಅಮೆರಿಕದಲ್ಲಿ ಐಟಿ ಸಂಸ್ಥೆಯಲ್ಲಿರುವ ಅತೀ ಹೆಚ್ಚು
ಭಾರತೀಯರು ಸೇರಿ ಇತರ ನೌಕರರಿಗೆ ವೇತನ ಹೆಚ್ಚಳ ಸೇರಿ ಇತರ ಸುಧಾರಣೆ ಕ್ರಮ ಕೈಗೊಳ್ಳಬೇಕೆಂದಿದೆ ವರದಿ.

ಈ ವೀಸಾದ ನೌಕರರಿಗೆ ಉತ್ತಮ ರೀತಿಯ ಕೆಲಸದ ವಾತಾವರಣ, ಸುರಕ್ಷತೆ ಮತ್ತು ಹೆಚ್ಚಿನ ಕಾರ್ಮಿಕರ ಹಕ್ಕುಗಳನ್ನು ಕಲ್ಪಿಸಿಕೊಡಬೇಕಿದೆ ಎಂದು ಸೌತ್ ಏಷಿಯಾ ಸೆಂಟರ್ ಆಫ್ ದಿ ಅಟ್ಲಾಂಟಿಕ್ ಕೌನ್ಸಿಲ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.