ಪದ್ಮಾವತ್ ಬದಲು ರೇಪ್ ಬ್ಯಾನ್ ಮಾಡಿ ಎಂಬ ಸಹಾನೆ ಫೇಸ್’ಬುಕ್ ಪೋಸ್ಟ್ ವೈರಲ್

Renuka Shahanes viral Facebook post Viral
Highlights

ದೇಶದಲ್ಲಿ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರ ನಿಷೇಧಿಸುವಂತೆ ಸಾಕಷ್ಟು ಪ್ರತಿಭಟನೆಗಳು ನಡೆದ ವಿರುದ್ಧ ನಟಿ ರೇಣುಕಾ ಸಹಾನೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಮುಂಬೈ (ಜ.23): ದೇಶದಲ್ಲಿ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರ ನಿಷೇಧಿಸುವಂತೆ ಸಾಕಷ್ಟು ಪ್ರತಿಭಟನೆಗಳು ನಡೆದ ವಿರುದ್ಧ ನಟಿ ರೇಣುಕಾ ಸಹಾನೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

 ಈಗಾಗಲೇ ಅನೇಕ ಸೆಲೆಬ್ರಿಟಿಗಳು ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದು, ರೇಣುಕಾ ವಿಭಿನ್ನವಾಗಿ ನಿಷೇಧ ಪ್ರಕ್ರಿಯೆಗೆ ತಮ್ಮ ವಿರೋಧವನ್ನು ವ್ಯಕ್ತಡಿಸಿದ್ದಾರೆ.

ತಮ್ಮ ಫೇಸ್’ಬುಕ್ ಪುಟದಲ್ಲಿ ಕೆಲವೊಂದು ಪೋಸ್ಟ್’ಗಳನ್ನು ಹಾಕಿದ್ದು, ಸಾಕಷ್ಟು ವೈರಲ್ ಆಗಿದೆ. ಅದರಲ್ಲಿ  ಅವರು ಕೆಲ ಬರವಣಿಗೆಗಳನ್ನು ಪ್ರದರ್ಶಿಸಿದ್ದಾರೆ. ಪದ್ಮಾವತಿ ಚಿತ್ರ ನಿಷೇಧಕ್ಕೆ ಆಗ್ರಹಿಸುವ ಮುನ್ನ ಇವುಗಳನ್ನು ಮೊದಲು ನಿಷೇಧಿಸಿ ಎಂದು ಹಾಕಿದ್ದಾರೆ. ಅದರಲ್ಲಿ ಹಣ್ಣು ಭ್ರೂಣ ಹತ್ಯೆ. ಅತ್ಯಾಚಾರ,  ಮೊದಲು ನಿಷೇಧಿಸಿ ಎಂದು ಹಾಕಿದ್ದಾರೆ.

 

loader