Asianet Suvarna News Asianet Suvarna News

ಕೆಆರ್‌ಎಸ್‌ನಿಂದ ಭಾರಿ ನೀರು : ಬೃಂದಾವನ ಪ್ರವೇಶ ನಿಷೇಧ

ಜಿಲ್ಲೆಯ ಕೆಆರ್‌ಎಸ್ ಜಲಾಶಯ ದಿಂದ ಭಾನುವಾರ 73,159 ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸಿದ್ಧ ಬೃಂದಾವನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿ ಸಲಾಗಿದ್ದು, ಸಂಗೀತ ಕಾರಂಜಿಯನ್ನೂ ಬಂದ್ ಮಾಡಲಾಗಿದೆ.

Release Water From KRS  Brundavana Entry Suspended
Author
Bengaluru, First Published Jul 16, 2018, 9:41 AM IST

ಮಂಡ್ಯ: ಜಿಲ್ಲೆಯ ಕೆಆರ್‌ಎಸ್ ಜಲಾಶಯ ದಿಂದ ಭಾನುವಾರ 73,159 ಕ್ಯುಸೆಕ್ ನೀರನ್ನು ಹೊರಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸಿದ್ಧ ಬೃಂದಾವನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿ ಸಲಾಗಿದ್ದು, ಸಂಗೀತ ಕಾರಂಜಿಯನ್ನೂ ಬಂದ್ ಮಾಡಲಾಗಿದೆ.

ರಂಗನತಿಟ್ಟು, ಬೃಂದಾ ವನದಲ್ಲಿ ದೋಣಿ ವಿಹಾರವನ್ನು ಸ್ಥಗಿತಗೊಳಿಸಿ ರುವುದರಿಂದ ಭಾನುವಾರ ಪ್ರವಾಸಕ್ಕೆ ಬಂದಿದ್ದ ಸಾವಿರಾರು ಪ್ರವಾಸಿಗರಿಗೆ ನಿರಾಸೆಯಾಗಿದೆ. ಅನಿರ್ದಿಷ್ಟಾವಧಿಯವರೆಗೆ ನಿಷೇಧ ಮುಂದು ವರೆಯಲಿದೆ ಎಂದು ಹೇಳಲಾಗಿದೆ.

ಎಡ ಮುರಿ, ಬಲಮುರಿ, ಸಂಗಮ, ಗೋಸಾಯಿ ಘಾಟ್, ನಿಮಿಷಾಂಬ ದೇಗುಲ, ಪಶ್ಚಿಮ ವಾಹಿನಿ ಸೇರಿದಂತೆ ಹಲವು ನದಿ ಪಾತ್ರದಲ್ಲಿ ನೀರು ತುಂಬಿದೆ. ಶ್ರೀರಂಗ ಪಟ್ಟಣದ ವೆಲ್ಲೆಸ್ಲಿ ಸೇತುವೆ ಮಟ್ಟದವರೆಗೆ ನೀರು ಹರಿಯುತ್ತಿದೆ. ಸೇತುವೆ ಮೇಲ್ಭಾಗಕ್ಕೆ ಕೇವಲ ೩ ಅಡಿಗಳಷ್ಟು ಅಂತರ ಮಾತ್ರ ಇದೆ. ರಂಗ ನತಿಟ್ಟು ಪಕ್ಷಿಧಾಮ ದಲ್ಲಿರುವ ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿವೆ.

Follow Us:
Download App:
  • android
  • ios