ಬೆಂಗಳೂರು (ಜ. 29): ಶ್ರೀಗಳಿಗೆ ಭಾರತರತ್ನ ಕೊಡದೇ ಇರಲು ಸರ್ಕಾರಕ್ಕೆ ತನ್ನದೇ ಆದ ಕಾರಣಗಳು ಇರಬಹುದೇನೋ. ಆದರೆ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಮೋದಿ, ಶಾ, ರಾಜನಾಥ್‌ ಸಿಂಗ್‌ ಅವರಲ್ಲಿ ಒಬ್ಬರಾದರೂ ಬರಬೇಕಿತ್ತು ಎಂದು ಬಹುತೇಕ ರಾಜ್ಯದ ಬಿಜೆಪಿ ಸಂಸದರಿಗೆ ಅನ್ನಿಸಿದೆ.

ಆದರೆ ಬಹಿರಂಗವಾಗಿ ಹೇಳುವ ಧೈರ್ಯ ಇಲ್ಲ. ಮೋದಿ ಸಾಹೇಬರು ಬರಬೇಕೆಂದು ಸದಾನಂದಗೌಡರು ಪ್ರಯತ್ನ ಪಟ್ಟರಾದರೂ, ಬರಲೇಬೇಕು ಇಲ್ಲವಾದರೆ ತಪ್ಪು ಸಂದೇಶ ಹೋಗುತ್ತದೆ ಎಂದು ಮನವರಿಕೆ ಮಾಡಲು ಸಾಧ್ಯವಾದಂತೆ ಇಲ್ಲ. ಹೋಗಲಿ ರಾಜನಾಥ್‌ ಸಿಂಗ್‌ರನ್ನು ಕಳಿಸಿಕೊಡಿ ಎಂಬುದನ್ನು ತಿಳಿಸಲೂ ರಾಜ್ಯ ಬಿಜೆಪಿ ನಾಯಕರಿಗೆ ಆಗಿಲ್ಲ. ಕೊನೆಗೆ ಯಡಿಯೂರಪ್ಪ ಸ್ವತಃ ನಿರ್ಮಲಾ ಸೀತಾರಾಮನ್‌ರಿಗೆ ಫೋನ್‌ ಮಾಡಿ ನೀವು ಬರಲೇಬೇಕು ಎಂದು ಕರೆಸಿಕೊಂಡಿದ್ದಾರೆ. ಭಾಷೆಯ ಸಮಸ್ಯೆಯೋ, ಮನವರಿಕೆ ಮಾಡಿಕೊಡುವ ಕ್ಷಮತೆಯ ಕೊರತೆಯೋ ಒಟ್ಟಾರೆ ರಾಜ್ಯ ಬಿಜೆಪಿ ನಾಯಕರಿಗೂ ದಿಲ್ಲಿ ನೇತೃತ್ವಕ್ಕೂ ದೊಡ್ಡ ಗ್ಯಾಪ್‌ ಇರುವಂತೆ ಕಾಣುತ್ತದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ