ನವದೆಹಲಿ (ಜ. 29):  ಹಿಂದೆಲ್ಲ ಯಡಿಯೂರಪ್ಪ ಬಗ್ಗೆ ಏನೇ ಸುದ್ದಿ ಇದ್ದರೂ ರಾಷ್ಟ್ರೀಯ ಮಾಧ್ಯಮಗಳಿಗೆ ಮತ್ತು ದಿಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿ ವಿವರಿಸಿ ಲೆಹೆರ್‌ ಸಿಂಗ್‌ ಬ್ಯಾಕ್‌ ಗ್ರೌಂಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಬಿಎಸ್‌ವೈ ಮತ್ತು ಲೆಹೆರ್‌ ಸಿಂಗ್‌ ನಡುವೆ ಈಗ ಸಂಬಂಧ ಕಿತ್ತುಹೋಗಿದೆ.

ಶಾಸಕರನ್ನು ದಿಲ್ಲಿಯಲ್ಲಿಯೇ ಇಡಲು ಯಡಿಯೂರಪ್ಪ ತೀರ್ಮಾನಿಸಿದಾಗ ಲೆಹೆರ್‌ ಸಿಂಗ್‌ ಶೋಭಾ ಕರಂದ್ಲಾಜೆ ಬಳಿ ಹೋಗಿ, ‘ನನ್ನ ಸಹಾಯ ಬೇಕಾ’ ಎಂದು ಕೇಳಿದ್ದರು. ಆದರೆ ಶೋಭಾ ‘ಸಾಹೇಬರು ಯಾವುದರ ಬಗ್ಗೆಯೂ ನಿಮ್ಮ ಜೊತೆ ಚರ್ಚೆ ಮಾಡಬಾರದು, ವಿವರ ತಿಳಿಸಬಾರದು ಎಂದಿದ್ದಾರೆ’ ಎಂದರಂತೆ. ಬೇರೆ ದಾರಿ ಕಾಣದೆ ಲೆಹೆರ್‌ ಸಿಂಗ್‌ ವಿಮಾನ ಹತ್ತಿ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ. ಲೆಹೆರ್‌ ಸಿಂಗ್‌ ತುಂಬಾ ವರ್ಷಗಳ ಕಾಲ ಪಕ್ಷದ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದವರು.

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ