ಬೆಂಗಳೂರು (ಫೆ.20):  ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನೇ ಹಾಕಬೇಕು ಎಂದು ದೇವೇಗೌಡರು ಪಟ್ಟು ಹಿಡಿದಿರುವುದರಿಂದ ಅಲ್ಲಿನ ಸಂಸದ ವೀರಪ್ಪ ಮೊಯ್ಲಿ ಏಕ್‌ದಂ ಸಕ್ರಿಯರಾಗಿದ್ದಾರೆ. ದಿಲ್ಲಿಯಲ್ಲಿ ಕಾಂಗ್ರೆಸ್ ನಾಯಕರ ಮನೆಗಳಿಗೆ ಎಡತಾಕುತ್ತಿರುವ ಮೊಯ್ಲಿ ತಾನು ಕಷ್ಟ ಕಾಲದಲ್ಲಿ ಹೇಗೆ ಕಾಂಗ್ರೆಸ್ ಜೊತೆ ಇದ್ದೇನೆ ಎಂಬುದನ್ನು ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದಾರೆ.

ಉಡುಪಿಯಿಂದ ಸ್ಪರ್ಧಿಸಲು ಶೋಭಾ ಕರಂದ್ಲಾಜೆ ರೆಡಿ : ಬಿಜೆಪಿ ನಾಯಕರಿಂದ ಕ್ಯಾತೆ

ಅಧಿಕಾರದಲ್ಲಿದ್ದಾಗ ಕನ್ನಡದ ಪತ್ರಕರ್ತರನ್ನು ಸೌಜನ್ಯಕ್ಕೂ ಮಾತನಾಡಿಸದ ಮೊಯ್ಲಿ ಸಾಹೇಬರಿಗೆ ಈಗ ಕನ್ನಡ ಪತ್ರಕರ್ತರ ದೋಸ್ತಿ ನೆನಪಾಗಿದ್ದು, ಊಟಕ್ಕೂ ಕೂಡ ಕರೆಯತೊಡಗಿದ್ದಾರೆ.

ಅಖಿಲೇಶ್‌ಗೆ ಪ್ರಿಯಾಂಕಾ ಚಿಂತೆ, ಮಾಯಾಗೆ ಓಟ್‌ ಬ್ಯಾಂಕ್ ಬೇಕಂತೆ!

ಸುದ್ದಿ ಏನಪ್ಪ ಅಂದರೆ, ಚಿಕ್ಕಬಳ್ಳಾಪುರದಿಂದ ತಪ್ಪಿದಲ್ಲಿ ತನಗೆ ಮಂಗಳೂರಿನಿಂದ ಅಥವಾ ಮಗ ಹರ್ಷಗೆ ಉಡುಪಿಯಿಂದ ಟಿಕೆಟ್ ಕೊಡುವಂತೆ ಕೇಳುತ್ತಿದ್ದಾರಂತೆ. 

- ಪ್ರಶಾಂತ್ ನಾತು 

ರಾಜಕಾರಣದ ಸುದ್ಧಿಗಾಗಿ  ಇಂಡಿಯಾ ಗೇಟ್  ಕ್ಲಿಕ್ ಮಾಡಿ