Asianet Suvarna News Asianet Suvarna News

ಪಂಚರಾಜ್ಯ ಚುನಾವಣೆ: ಫಲಿತಾಂಶ ವಿಳಂಬಕ್ಕೆ ಕಾರಣವೇನು?

ಪಂಚರಾಜ್ಯ ಚುನಾವಣಾ ಫಲಿತಾಂಶ ವಿಳಂಬ | ಭಾರೀ ಕುತೂಹಲ ಕೆರಳಿಸಿತ್ತು ಚುನಾವಣಾ ಫಲಿತಾಂಶ | 

Reason behind 5 states assembly elections 2018 result delayed
Author
Bengaluru, First Published Dec 12, 2018, 11:18 AM IST

ನವದೆಹಲಿ ( ಡಿ. 12): ಮುಂಜಾನೆ 10-11 ಗಂಟೆಗೆಲ್ಲಾ ಸಿಗಬಹುದು ಎಂದು ಎಣಿಸಲಾಗಿದ್ದ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಅಧಿಕೃತ ಫಲಿತಾಂಶ ಹೊರಬೀಳುವ ವೇಳೆ ಮಂಗಳವಾರ ಸಂಜೆಯಾಗಿತ್ತು. ಇದಕ್ಕೆ ಮುಖ್ಯ ಕಾರಣ ವಿವಿಪ್ಯಾಟ್ ಅಂದರೆ ಮತತಾಳೆ ಯಂತ್ರಗಳು.

ಬಿಜೆಪಿ ಗಪ್-ಚುಪ್: ರಾಜ್ಯ ಕಾಂಗ್ರೆಸ್‌ ಅತೃಪ್ತ ನಾಯಕರ ಆಟ ಬಂದ್‌..?

ಮತದಾರನೊಬ್ಬ ತಾನು ಹಾಕಿದ ಮತ, ತಾನು ಹಾಕಿದ ಅಭ್ಯರ್ಥಿಗೇ ಬಿದ್ದಿದೆಯೇ ಎಂಬುದನ್ನು ಖಚಿತಪಡಿಸಲು ಇರುವ ಅವಕಾಶವಿದು. ಪ್ರತಿ ಮಂತ್ರಕ್ಕೂ ಈ ವಿವಿಪ್ಯಾಟ್‌ಗಳನ್ನು ಅಳವಡಿಸಲಾಗಿರುತ್ತದೆ. ಪ್ರತಿ ಕ್ಷೇತ್ರದ ಮತ ಎಣಿಕೆ ಮುಗಿದ ಬಳಿಕ, ಆ ಕ್ಷೇತ್ರದ ಯಾವುದಾದರೂ ಒಂದು ಬೂತ್‌ನಲ್ಲಿ ಚಲಾವಣೆಯಾದ ಎಲ್ಲಾ ಮತಗಳನ್ನು, ವಿವಿಪ್ಯಾಟ್‌ನಲ್ಲಿ ಮುದ್ರಿತವಾದ ಪ್ರತಿಯೊಂದಿಗೆ ಹೊಂದಾಣಿಕೆ ಮಾಡಲಾಗುತ್ತದೆ. ಇದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಹೀಗಾಗಿಯೇ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಲು ಸಮಯ ಹಿಡಿಯಿತು.

Follow Us:
Download App:
  • android
  • ios