Asianet Suvarna News Asianet Suvarna News

‘ಸಚಿವ ಸ್ಥಾನ ಕೊಟ್ಟರೆ ಬಿಜೆಪಿಗೆ ಹೋಗಲು ಸಿದ್ಧ’

ಒಂದು ವೇಳೆ ಸಚಿವ ಸ್ಥಾನವನ್ನು ನೀಡಿದರೆ ಬಿಜೆಪಿಗೆ ಹೋಗಲು ಸಿದ್ಧ ಎಂದು ಈ ಶಾಸಕ ಬಹಿರಂಗ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೇ ತಮಗೆ ಯಾವುದೇ ಪಕ್ಷಬೇಧವಿಲ್ಲ ಎಂದಿದ್ದಾರೆ. 

Ready To Join Of BJP Give Portfolio Says MLA Nagesh
Author
Bengaluru, First Published Sep 18, 2018, 8:05 AM IST

ಕೋಲಾರ : ಕೋಲಾರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ನಾಗೇಶ್, ಸಚಿವ ಸ್ಥಾನ ನೀಡಿದರೆ ಬಿಜೆಪಿ ಬೆಂಬಲ ನೀಡಲು ಸಿದ್ಧನಾಗಿದ್ದೇನೆ. ನನಗೆ ಯಾವುದೇ ಪ್ಷಕ ಬೇಧವಿಲ್ಲ. 

ಯಾವುದೇ ಪಕ್ಷವಾದರೂ ಸರಿ ನಾನು ಚುನಾವಣೆಯಲ್ಲಿ ಖರ್ಚು ಮಾಡಿರುವ ಹಣ ಹಾಗೂ ಸಚಿವ ಸ್ಥಾನಕೊಟ್ಟರೆ ಆ ಪಕ್ಷಕ್ಕೆ ಹೋಗುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಬಿಜೆಪಿ ಮುಖಂಡರು ಗಣಿ-ಧಣಿಗಳ ಮೂಲಕ ಆಪರೇಷನ್ ಕಮಲ ಮಾಡಲು ಮುಂದಾಗಿ, ನನಗೆ ಸಚಿವ ಸ್ಥಾನ ನೀಡಿದರೆ ನಾನೇ ಅವರನ್ನು ಖುದ್ದಾಗಿ ಭೇಟಿ ಮಾಡಿ ಬೆಂಬಲ ಕೊಡಲು ಸಿದ್ಧನಿದ್ದೇನೆ.

ಇದುವರೆಗೂ ಯಾರು ಸಹ ನನ್ನನ್ನು ಸಂಪರ್ಕಿಸಿಲ್ಲ. ಒಂದೊಮ್ಮೆ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿ, ಸಚಿವ ಸ್ಥಾನದ ಭರವಸೆ ನೀಡಿದರೆ, ನಾನೇ ಹೋಗಿ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios