Asianet Suvarna News Asianet Suvarna News

ಇವನು ಮತ್ತೊಬ್ಬ ಉಮೇಶ್ ರೆಡ್ಡಿ: 23ಕ್ಕೂ ಹೆಚ್ಚು ಅತ್ಯಾಚಾರ !

ಬಂಧಿತ ನಟೋರಿಯಸ್ ವಿಕೃತ ಅಶೋಕ ನಾಯ್ಕೊಡಿ(43) ಎಂದು ಗುರುತಿಸಲಾಗಿದೆ. ಈತ ಈಗಾಗಲೇ 23ಕ್ಕಿಂತ ಹೆಚ್ಚು ಆತ್ಯಾಚಾರ ಎಸಗಿದ್ದು, ಮನಗೂಳಿ ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಧೀಸಿದಂತೆ ಈತನ ವಿರುದ್ಧ ಪ್ರಕರಣ ದಾಖಲಾಗಿವೆ.

Rapist Arrest at Vijayapura district
  • Facebook
  • Twitter
  • Whatsapp

ವಿಜಯಪುರ(ಜು.12): ವಿಕೃತ ಕಾಮಿ ಉಮೇಶ ರೆಡ್ಡಿಯನ್ನು ಮೀರಿಸುವ ಮತ್ತೊಬ್ಬ ವಿಕೃತ ಕಾಮುಕನೊಬ್ಬನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಬಂಧಿತ ನಟೋರಿಯಸ್ ವಿಕೃತ ಅಶೋಕ ನಾಯ್ಕೊಡಿ(43) ಎಂದು ಗುರುತಿಸಲಾಗಿದೆ. ಈತ ಈಗಾಗಲೇ 23ಕ್ಕಿಂತ ಹೆಚ್ಚು ಆತ್ಯಾಚಾರ ಎಸಗಿರುವ ಶಂಕೆಯಿದೆ. ಮನಗೂಳಿ ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಧೀಸಿದಂತೆ ಈತನ ವಿರುದ್ಧ ಪ್ರಕರಣ ದಾಖಲಾಗಿವೆ.

ಇನ್ನು ಕಾಮುಕ ಅಶೋಕಗೆ ವೃದ್ಧ ಮಹಿಳೆಯರೇ ಟಾರ್ಗೆಟ್ ಗಳಾಗಿದ್ದು, ಈತನಿಗೆ ಜೂಜಾಟ ಆಡುವ ಜೊತೆಗೆ ಮೋಜು ಮಸ್ತಿಯ ಶೋಕಿಗಳಿವೆ. ಜೂಜಾಟ ಆಡುವ ಸಲುವಾಗಿ ವೃದ್ಧೆ ಮಹಿಳೆಯರಿಗೆ ತನ್ನ ಸ್ವಿಪ್ಟ್ ಕಾರಿನಲ್ಲಿ ಲಿಫ್ಟ್ ಕೊಡುವ ನೆಪದಲ್ಲಿ ವೃದ್ಧ ಮಹಿಳೆಯರನ್ನು ಕರೆದುಕೊಂಡು ಹೋಗಿ ಹೊರವಲಯದಲ್ಲಿ ಅತ್ಯಾಚಾರವೆಸಗಿ ನಂತರ ಅವರ ಮೇಲೆರುವ ಬಂಗಾರ ದೋಚಿಕೊಂಡು ಪರಾರಿಯಾಗುತ್ತಿದ್ದ.

ಆದರೆ ಇಂದು ಆತನ ಹಣೆ ಬರಹ ಸರಿಯಾಗಿ ಇರಲಿಲ್ಲ. ಕಾಮುಕ ಅಶೋಕ ವೃದ್ಧ ಮಹಿಳೆ ಜೊತೆಗೆ ಕೃತ್ಯದ ಸ್ಥಳದಲ್ಲೇ

ಸಿಕ್ಕಿ ಬಿದ್ದಿದ್ದಾನೆ. ಅಲ್ಲದೇ, ವಿಜಯಪುರ ಜಿಲ್ಲೆಯಲ್ಲಿ 23ಕ್ಕಿಂತ ಹೆಚ್ಚು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಈತ ವಿಜಯಪುರದಲ್ಲಲ್ಲದೆ ಬೇರೆ ಜಿಲ್ಲೆಗಳಲ್ಲೂ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿಯಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios