ಅತ್ಯಾಚಾರ ಸಂತ್ರಸ್ಥೆಯ ವಿವರ ಬಹಿರಂಗಪಡಿಸುವಂತಿಲ್ಲ

Rape Victim Details Should not reveal
Highlights

ಅತ್ಯಾಚಾರಕ್ಕೆ ಸಂಬಂಧಿಸಿದಂತೆ  ಮಾಧ್ಯಮಗಳು ಏನೇ ವರದಿ ಪ್ರಕಟಿಸಿದರೂ ಸಂತ್ರಸ್ತೆಯ ಹೆಸರು, ಫೋಟೋಗಳಿಗೆ ಕಡಿವಾಣ ಹಾಕಲು ಉಗ್ರಪ್ಪ ಸಮಿತಿ ಪ್ರಸ್ತಾಪ ಮಾಡಿದೆ. 

ಬೆಂಗಳೂರು (ಮಾ.23): ಅತ್ಯಾಚಾರಕ್ಕೆ ಸಂಬಂಧಿಸಿದಂತೆ  ಮಾಧ್ಯಮಗಳು ಏನೇ ವರದಿ ಪ್ರಕಟಿಸಿದರೂ ಸಂತ್ರಸ್ತೆಯ ಹೆಸರು, ಫೋಟೋಗಳಿಗೆ ಕಡಿವಾಣ ಹಾಕಲು ಉಗ್ರಪ್ಪ ಸಮಿತಿ ಪ್ರಸ್ತಾಪ ಮಾಡಿದೆ. 

ದೌರ್ಜನ್ಯ, ಅತ್ಯಾಚಾರ ಪ್ರಕರಣಗಳ ತನಿಖೆ ಪೂರ್ಣಗೊಳ್ಳುವವರೆಗೆ ಸಂತ್ರಸ್ತೆಯ ವಿವರಗಳನ್ನ  ಪ್ರಕಟಿಸದಿರಲು ಕಾನೂನು ಅಗತ್ಯ.  ಸತ್ಯಾಸತ್ಯತೆ ಪರಿಶೀಲಿಸದೆ ಮಾಧ್ಯಮಗಳು ಪ್ರಕರಣಗಳನ್ನ ವೈಭವೀಕರಿಸಬಾರದು. ಪೊಕ್ಸೋ ಕಾಯ್ದೆ ಉಲ್ಲಂಘಿಸಿದರೂ  ಮಾಧ್ಯಮಗಳ ವಿರುದ್ಧ ಕ್ರಮ ಜರುಗಿಸಿಲ್ಲ.. ಕಾನೂನುಬಾಹಿರವಾಗಿ ನಡೆದುಕೊಂಡ ಮಾಧ್ಯಮಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ.  ಪ್ರಕರಣ ಆರಂಭದಲ್ಲಿ ಮಾತ್ರ ಮಾಹಿತಿ ನೀಡಿ ಅಂತ್ಯದಲ್ಲಿ ಏನಾಯ್ತು ಎಂದು ಮಾಧ್ಯಮಗಳು ತಿಳಿಸುತ್ತಿಲ್ಲ.  ಅಂತಿಮವಾಗಿ ಆರೋಪಿಗೆ ಶಿಕ್ಷೆ ಆಯ್ತೋ ಇಲ್ಲವೋ ವರದಿ ಬಿತ್ತರಿಸಬೇಕು. ಪರಿಹಾರದ ಬಗ್ಗೆ ತಪ್ಪದೇ ಮಾಹಿತಿ ಕೊಡಬೇಕು ಎಂದು ಉಗ್ರಪ್ಪ ಸಮಿತಿ ವರದಿ ನೀಡಿದೆ.  

loader