ಬಂದಿದೆ ರೇಪ್ ಪ್ರೂಫ್ ಅಂಡರ್'ವೇರ್

First Published 10, Jan 2018, 12:11 PM IST
Rape Proof Underware
Highlights

ಗ್ರಾಮೀಣ ಭಾಗದಿಂದ ಬಂದ ಯುವತಿಯೊಬ್ಬಳು ‘ಅತ್ಯಾಚಾರ ನಿರೋಧಕ ಅಂಡರ್‌ವೇರ್’ ಶೋಧಿಸಿ ಸಾಧನೆ ಮಾಡಿದ್ದಾಳೆ. ಸೀನು ಕುಮಾರಿ ಎಂಬ ಉತ್ತರಪ್ರದೇಶದ ಫರೂಖಾಬಾದ್‌'ನ ಯುವತಿಯೇ ಇದರ ಸಂಶೋಧಕಿ. ಸುಮಾರು 4,000 ರೂ.  ಖರ್ಚು ಮಾಡಿ ಈ ಅಂಡರ್ ವೇರನ್ನು ಈಕೆ ಸಿದ್ಧಗೊಳಿಸಿದ್ದಾಳೆ.

ಫರೂಖಾಬಾದ್ (ಜ.10): ಗ್ರಾಮೀಣ ಭಾಗದಿಂದ ಬಂದ ಯುವತಿಯೊಬ್ಬಳು ‘ಅತ್ಯಾಚಾರ ನಿರೋಧಕ ಅಂಡರ್‌ವೇರ್’ ಶೋಧಿಸಿ ಸಾಧನೆ ಮಾಡಿದ್ದಾಳೆ. ಸೀನು ಕುಮಾರಿ ಎಂಬ ಉತ್ತರಪ್ರದೇಶದ ಫರೂಖಾಬಾದ್‌'ನ ಯುವತಿಯೇ ಇದರ ಸಂಶೋಧಕಿ. ಸುಮಾರು 4,000 ರೂ.  ಖರ್ಚು ಮಾಡಿ ಈ ಅಂಡರ್ ವೇರನ್ನು ಈಕೆ ಸಿದ್ಧಗೊಳಿಸಿದ್ದಾಳೆ.

ಗುಲಾಬಿ ಬಣ್ಣದ ಈ ಅಂಡರ್'ವೇರ್‌ಗೆ ಒಂದು ಲಾಕ್, ಜಿಪಿಎಸ್ ಎಚ್ಚರಿಕೆ ವ್ಯವಸ್ಥೆ ಹಾಗೂ ವಿಡಿಯೋ ಕ್ಯಾಮರಾ ಅಳವಡಿಕೆಯಾಗಿದೆ. ಇದು ಬುಲೆಟ್ ಪ್ರೂಫ್ ಆಗಿದ್ದು, ಚಾಕುವಿನಿಂದ ಕತ್ತರಿಸಿದರೂ ತುಂಡಾಗದು. ವಿಡಿಯೋ ಕ್ಯಾಮರಾದಲ್ಲಿ ಅತ್ಯಾಚಾರಿಯ ಮುಖ ರೆಕಾರ್ಡ್ ಆಗುತ್ತದೆ. ಯಾರಾದರೂ ಅತ್ಯಾಚಾರ ಎಸಗಲು ಬಂದರೆ ಜಿಪಿಎಸ್ ಎಚ್ಚರಿಕೆ ವ್ಯವಸ್ಥೆ ಪೊಲೀಸರಿಗೆ ಸಂದೇಶ ರವಾನಿಸುತ್ತದೆ. ಅಂಡರ್'ವೇರ್‌ಗೆ ಲಾಕ್ ವ್ಯವಸ್ಥೆ ಇದೆ. ಇದು ಪಾಸ್‌ವರ್ಡ್ ಹಾಕಿದರೆ

ಮಾತ್ರ ಓಪನ್ ಆಗುತ್ತದೆ. ಹೀಗಾಗಿ ಅಂಡರ್‌ವೇರನ್ನು ಸುಲಭವಾಗಿ ಕಳಚಲು ಆಗದು. ‘ಯಾರಾದರೂ ಕಾಮುಕರು ಮಹಿಳೆಯೊಬ್ಬಳನ್ನು ಚುಡಾಯಿಸಲು ಯತ್ನಿಸಿದರೆ ಇದು ಪೊಲೀಸರಿಗೆ ಹಾಗೂ ಸಾಧನಲ್ಲಿ ನೋಂದಾಯಿತವಾದ ಸಂಬಂಧಿಕರ ದೂರವಾಣಿಗೆ ಸಂದೇಶ  ರವಾನಿಸುತ್ತದೆ. ಜಿಪಿಎಸ್ ಸಾಧನದ ಸ್ಥಳವನ್ನು ಗಮನಿಸಿ ಪೊಲೀಸರಿಗೆ ಘಟನಾ ಸ್ಥಳ ತಲುಪಲು ಸಹಾಯವಾಗುತ್ತದೆ. ಅತ್ಯಾಚಾರ ಯತ್ನ ವಿಫಲವಾಗುತ್ತದೆ’ ಎಂದು ಸೀನು ಕುಮಾರಿ ಹೇಳಿದಳು. ಇದನ್ನು ಮಾರುಕಟ್ಟೆಯಲ್ಲಿ ಮಾರಲು ತಾನು ಸಿದ್ಧಳಿರುವುದಾಗಿ ಅವಳು ತಿಳಿಸಿದಳು.

 

loader