ಬೆಂಗಳೂರು :  ಚಲನಚಿತ್ರದಲ್ಲಿ ನಟನೆಗೆ ಅವಕಾಶ ಕೊಡಿಸುವುದಾಗಿ ನಂಬಿಸಿ ಯುವತಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಚಲನಚಿತ್ರ ನಿರ್ಮಾಪಕನೊಬ್ಬನನ್ನು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಇಸ್ರೋಲೇಔಟ್‌ ನಿವಾಸಿ ಕುಮಾರ್‌ ಗೌತಮ್‌ ಬಂಧಿತನಾಗಿದ್ದು, ಆತನ ವಿರುದ್ಧ ಬುಧವಾರ ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದಳು. ಅದರನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೂರು ವರ್ಷಗಳ ಹಿಂದೆ ಸಂತ್ರಸ್ತೆಗೆ ಕುಮಾರ್‌ ಗೌತಮ್‌ ಪರಿಚಯವಾಗಿತ್ತು. ಬಳಿಕ ಆರೋಪಿಯು ತಾನು ನಿರ್ಮಾಣ ಮಾಡಿದ ‘ಐ’ ಹೆಸರಿನ ಸಿನಿಮಾದಲ್ಲಿ ಸಂತ್ರಸ್ತೆಗೆ ಪುಟ್ಟದೊಂದು ಪಾತ್ರ ಕೊಡಿಸಿದ್ದ. ಆಗ ಮುಂದೆ ಸಹ ನಟನೆಗೆ ಅವಕಾಶ ಕೊಡಿಸುತ್ತೇನೆ ಎಂದು ಹೇಳಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ