ರಾಮನಗರ(ಡಿ.20)  ಅತ್ಯಾಚಾರ ಆರೋಪ ಎದುರಿಸುತ್ತಿರುವ ನಿತ್ಯಾನಂದ ಸ್ವಾಮೀಜಿ ಇಂದು(ಗುರುವಾರ) ನ್ಯಾಯಾಲಯಕ್ಕೆ ಹಾಜರಾಗಬೇಕಾಗಿತ್ತು. ಆದರೆ ನಿತ್ಯಾನಂದ ಸ್ವಾಮಿ ಗೈರಾಗಿದ್ದಾರೆ.

ನಿತ್ಯಾನಂದ ಗೈರಾದ ಹಿನ್ನೆಲೆಯಲ್ಲಿ ಜ. 3 ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ. ವಿಚಾರಣೆ ಮುಂದೂಡಿ 3 ನೇ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾ. ಗೋಪಾಲ್ ಕೃಷ್ಣ ರೈ ಆದೇಶ ನೀಡಿದ್ದಾರೆ.

ವಿವಾದಾತ್ಮಕ ದೇವಮಾನವ ಸ್ವಾಮಿ ನಿತ್ಯಾನಂದ ಇಲ್ಲಿಲ್ಲ?

ನಿತ್ಯಾನಂದ ಕಾಣೆಯಾಗಿದ್ದಾನೆ! ನಿತ್ಯಾನಂದ ಪದೇ ಪದೇ ವಿಚಾರಣೆಗೆ ತಪ್ಪಿಸಿಕೊಳ್ಳುತ್ತಿರುವದಕ್ಕೆ ಆಕ್ರೋಶಗೊಂಡಿರುವ ಕನ್ನಡ ಪರ ಸಂಘಟನೆಗಳು ನಿತ್ಯಾನಂದ ಕಾಣೆಯಾಗಿದ್ದಾನೆ ಹುಡುಕಿ ಕೊಟ್ಟವರೆಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಮುದ್ರಿಸಿ ಕರಪತ್ರ ಹಂಚುತ್ತಿರುವುದು ಕಂಡುಬಂದಿದೆ.

ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಕರ ಪತ್ರ ಅಂಟಿಸಿಲಾಗಿದೆ. ರಾಮನಗರ ಪ್ರಮುಖ ರಸ್ತೆಗಳಲ್ಲಿ ಕರಪತ್ರ ಅಂಟಿಸಿ ನಿತ್ಯಾನಂದನ ಬಗ್ಗೆ ಅಣಕವಾಡಲಾಗಿದೆ.