ಕಸಾಪ ನಗರಾಧ್ಯಕ್ಷರ ವಿರುದ್ಧ ರೇಪ್ ಕೇಸ್

Rape Case Aganst Bengaluru Kasapa President
Highlights

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಯಣ್ಣ ಅವರು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು : ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಾಯಣ್ಣ ಅವರು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಹಿಳೆ ನೀಡಿದ ದೂರಿನ ಮೇರೆಗೆ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ವಂಚನೆ, ಪ್ರಾಣ ಬೆದರಿಕೆ ಅಡಿ ಎಫ್‌ಐಆರ್ ದಾಖಲಿಸಲಾಗಿದೆ. ಮಾಯಣ್ಣ ಅವರ ವಿರುದ್ಧ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್ .ಡಿ.ಶರಣಪ್ಪ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕೌಟುಂಬಿಕ ಕಲಹದಿಂದ ನಾನು ಪತಿಯಿಂದ ದೂರವಾಗಿ ತಾಯಿ ಮತ್ತು ಪುತ್ರನೊಂದಿಗೆ ವಾಸವಿದ್ದೆ. ತಾಯಿಗೆ ಪರಿಚಿತರಾಗಿದ್ದ ಮಾಯಣ್ಣ ಅವರು ತನಗೆ ಅವರ ಕಚೇರಿಯಲ್ಲಿ ಸಹಾಯಕಿ ಕೆಲಸ ನೀಡಿದ್ದರು. ತಿಂಗಳಿಗೆ ಮೂರು ಸಾವಿರ ರು. ವೇತನ ನೀಡುತ್ತಿದ್ದರು. ಈ ವೇಳೆ ತನ್ನ ಪತ್ನಿಗೆ ಕಾಯಿಲೆ ಇದ್ದು, ಹೆಚ್ಚು ದಿನ ಬದುಕುವುದಿಲ್ಲ.  ತನಗೆ ಗಂಡು ಮಗು ಅಗತ್ಯವಿದ್ದು, ವಿವಾಹವಾಗುವಂತೆ ನನ್ನ ಬಳಿ ಕೇಳಿಕೊಂಡರು. ವಿವಾಹವಾಗಲು ನಿರಾಕರಿಸಿದಾಗ ನನ್ನ ಹಾಗೂ ಪುತ್ರನ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಒಂದು ಕೋಟಿ ಠೇವಣಿ ಇಡುವುದಾಗಿ ಹೇಳಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಪತಿಯಿಂದ ವಿಚ್ಛೇದನ ದೊರೆತರೆ ವಿವಾಹವಾಗುವುದಾಗಿ ಮಾಯಣ್ಣಗೆ ತಿಳಿಸಿದ್ದೆ. ಇದಕ್ಕೆ ಒಪ್ಪಿದ ಮಾಯಣ್ಣ 2015ರಲ್ಲಿ 5 ಲಕ್ಷ ಹಣ ನೀಡಿ ಭುವನೇಶ್ವರಿ ನಗರದಲ್ಲಿ ಭೋಗ್ಯಕ್ಕೆ ಮನೆ ಮಾಡಿಕೊಟ್ಟಿದ್ದರು. ಮನೆಗೆ ಬೇಕಾದ ಗೃಹೋಪಯೋಗಿ ವಸ್ತುಗಳು ಹಾಗೂ ಆಭರಣ ಕೊಡಿಸಿದ್ದರಲ್ಲದೆ, ತನ್ನ ಪುತ್ರನ ವಿದ್ಯಾಭ್ಯಾಸದ ಖರ್ಚನ್ನು ಭರಿಸುತ್ತಿದ್ದರು. ವಾರಕ್ಕೆ ಎರಡ್ಮೂರು ಬಾರಿ ವಿಶ್ರಾಂತಿ ಪಡೆಯುವ ನೆಪದಲ್ಲಿ ಮನೆಗೆ ಬರುತ್ತಿದ್ದ ಅವರು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ನನ್ನನ್ನು ಬಳಸಿ ಕೊಂಡಿದ್ದಾರೆ. ಇದೇ ರೀತಿ ಒಮ್ಮೆ ಬಿಡದಿ ಸಮೀಪದ ವಂಡರ್ ಲಾಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.

ಮಾಯಣ್ಣ ಪತ್ನಿಯಿಂದ ಹಲ್ಲೆ: ಕ್ರಮೇಣ ನನ್ನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ ಅವರು ಬೇರೆಯವರೊಂದಿಗೆ ಅನೈ ತಿಕ ಸಂಬಂಧ ಹೊಂದಿದ್ದೀಯಾ ಎಂದು ಆರೋಪಿಸಿ ಪ್ರಾಣ ಬೆದರಿಕೆ ಹಾಕಿ ಕೆಲಸದಿ ತೆಗೆದು ಹಾಕಿದ್ದರು. ಭೋಗ್ಯಕ್ಕೆ ನೀಡಿದ್ದ ಹಣ, ಗೃಹೋಪಯೋಗಿ ವಸ್ತುಗಳನ್ನು ವಾಪಸ್ ಕೊಡುವಂತೆ ಧಮ್ಕಿ ಹಾಕಿದ್ದಾರೆ.

ಫೆ.6 ರಂದು ಅವರ ಕಚೇರಿಗೆ ಹೋಗಿ ತನಗೆ ಆದ ಅನ್ಯಾಯದ ಬಗ್ಗೆ ಮಾಯಣ್ಣನನ್ನು ಪ್ರಶ್ನಿಸಿದ್ದೆ. ಈ ವೇಳೆ ಮಾಯಣ್ಣ ಹಾಗೂ ಅವರ ಪತ್ನಿ ಉಮಾ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಮಾಯಣ್ಣ ಅವರ ಪತ್ನಿ ಉಮಾ ತಮ್ಮ ರಾಜೇಶ್ ಎಂಬಾತನ ಜತೆ ತಮ್ಮ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.

loader