ಕೇಂದ್ರ ಸಚಿವರ ವಿರುದ್ಧ ಅತ್ಯಾಚಾರ ಪ್ರಕರಣ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Aug 2018, 8:10 AM IST
Rape Case Against Union Minister
Highlights

ಅತ್ಯಾಚಾರ ಪ್ರಕರಣಗಳಿಗೆ ಕಠಿಣ ಶಿಕ್ಷೆ ನೀಡುವ ಕಾನೂನಿನ ಕುರಿತು ಚರ್ಚೆಗಳು ವ್ಯಾಪಕವಾಗಿರುವ ನಡುವೆಯೇ, ಸ್ವತಃ ಕೇಂದ್ರ ಸರ್ಕಾರದ ಸಚಿವರೊಬ್ಬರ ಮೇಲೆಯೇ ಅತ್ಯಾಚಾರದ ಆರೋಪ ಕೇಳಿಬಂದಿದೆ

ಗುವಾಹತಿ: ಅತ್ಯಾಚಾರ ಪ್ರಕರಣಗಳಿಗೆ ಕಠಿಣ ಶಿಕ್ಷೆ ನೀಡುವ ಕಾನೂನಿನ ಕುರಿತು ಚರ್ಚೆಗಳು ವ್ಯಾಪಕವಾಗಿರುವ ನಡುವೆಯೇ, ಸ್ವತಃ ಕೇಂದ್ರ ಸರ್ಕಾರದ ಸಚಿವರೊಬ್ಬರ ಮೇಲೆಯೇ ಅತ್ಯಾಚಾರದ ಆರೋಪ ಕೇಳಿಬಂದಿದೆ. ಅಸ್ಸಾಂನ ನಾಗಾಂವ್‌ನಲ್ಲಿ 24ರ ಹರೆಯದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿ ರೈಲ್ವೆ ಖಾತೆಯ ರಾಜ್ಯ ಸಚಿವ ರಾಜೇನ್‌ ಗೊಹೇನ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ನಾಗಾಂವ್‌ ಪೊಲೀಸ್‌ ಠಾಣೆಯಲ್ಲಿ ಸಚಿವ ಗೊಹೇನ್‌ ವಿರುದ್ಧ ಆ.2ರಂದು ದೂರು ಸ್ವೀಕಾರವಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ನಾಗಾಂವ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಬಿತಾ ದಾಸ್‌ ಹೇಳಿದ್ದಾರೆ. ಆದರೆ, ಪ್ರಕರಣದ ಕುರಿತು ಹೆಚ್ಚಿನ ವಿವರ ನೀಡಲು ಅವರು ನಿರಾಕರಿಸಿದ್ದಾರೆ.

‘ಘಟನೆ ಏಳೆಂಟು ತಿಂಗಳ ಹಿಂದೆ ನಡೆದಿದೆ. ಗೊಹೇನ್‌ ಮತ್ತು ಯುವತಿ ದೀರ್ಘಕಾಲದಿಂದ ಪರಸ್ಪರ ಪರಿಚಯಸ್ಥರು. ಕೇಂದ್ರ ಸಚಿವರು ಆಕೆಯ ಮನೆಗೆ ಆಗಾಗ ಭೇಟಿ ನೀಡುತ್ತಿದ್ದರು. ಯುವತಿಯ ಪತಿ ಮತ್ತು ಇತರ ಸಂಬಂಧಿಕರು ಮನೆಯಲ್ಲಿಲ್ಲದಾಗ ಸಚಿವರು ಈ ಕೃತ್ಯ ಎಸಗಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಚಿವರ ಬಂಧನವಾಗಲಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದೇವೆ, ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಬಂಧನ ನಡೆಯಬಹುದು ಎಂದಿದ್ದಾರೆ.

loader