ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ; ಓರ್ವ ಅಂದರ್

First Published 6, Mar 2018, 11:43 AM IST
Rape Attempt in Vijayapura
Highlights

ಜಿಲ್ಲೆಯಲ್ಲಿ ಮತ್ತೊಂದು‌ ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ ಘಟನೆ ನಡೆದಿದೆ.  ಶಾಲೆಗೆ ಹೋಗುತ್ತಿದ್ದ 15 ವರ್ಷದ  ಅಪ್ರಾಪ್ತೆ ಮೇಲೆ ನಾಲ್ವರು ಸಾಮೂಹಿಕ ‌ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.  

ವಿಜಯಪುರ‌ (ಮಾ. 06): ಜಿಲ್ಲೆಯಲ್ಲಿ ಮತ್ತೊಂದು‌ ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ ಘಟನೆ ನಡೆದಿದೆ.  ಶಾಲೆಗೆ ಹೋಗುತ್ತಿದ್ದ 15 ವರ್ಷದ  ಅಪ್ರಾಪ್ತೆ ಮೇಲೆ ನಾಲ್ವರು ಸಾಮೂಹಿಕ ‌ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.  

ಬಾಲಕಿಯನ್ನು ಬಾಳೆ ತೋಟಕ್ಕೆ ಕಾಮುಕರು ಎತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.  ಆಗ ಬಾಲಕಿ ಜೋರಾಗಿ ಕಿರುಚಿದಾಗ ಕಿರುಚಾಟ ಕೇಳಿ ಸ್ಥಳೀಯರು ಆಗಮಿಸಿದ್ದಾರೆ. ಸ್ಥಳೀಯರನ್ನು ಕಂಡು ಮೂವರು ಪರಾರಿಯಾಗಿದ್ದಾರೆ. ಓರ್ವ ಸಿಕ್ಕಿ ಬಿದ್ದಿದ್ದಾನೆ. ಅವನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.  ಪರಾರಿಯಾದ ಮೂವರ ಬಂಧನಕ್ಕೆ ಪೊಲೀಸರು  ಜಾಲ‌ ಬೀಸಿದ್ದಾರೆ. 
ಘಟನೆಯಿಂದ ಆಘಾತಗೊಂಡು ಪ್ರಜ್ಞೆ ತಪ್ಪಿದ ಬಾಲಕಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.  ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

loader