ರಾಜಧಾನಿ ಕಾಮುಕನ ಅಟ್ಟಹಾಸ; 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

First Published 26, Feb 2018, 3:09 PM IST
Rape Against on 6 year old girl
Highlights

ರಾಜಧಾನಿಯಲ್ಲಿ  ಆರು ವರ್ಷದ ಬಾಲಕಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿ ಅಟ್ಟಹಾಸಗೈದಿದ್ದಾನೆ. ನಗರದ ಹೊರವಲಯದ ವರ್ತೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  

ಬೆಂಗಳೂರು (ಫೆ.26): ರಾಜಧಾನಿಯಲ್ಲಿ  ಆರು ವರ್ಷದ ಬಾಲಕಿಯ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿ ಅಟ್ಟಹಾಸಗೈದಿದ್ದಾನೆ. ನಗರದ ಹೊರವಲಯದ ವರ್ತೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.  

ಮಗುವಿನ  ಸಂಬಂಧಿಯಿಂದಲೇ  ಎರಡು ದಿನಗಳ ಹಿಂದೆ ಘಟನೆ ನಡೆದಿದೆ.  ಪ್ರಕರಣ ದಾಖಲಿಸದಂತೆ ಪೋಷಕರ ಮೇಲೆ ಕಾಮುಕನ ಸಂಬಂಧಿಗಳು ಒತ್ತಡ ಹೇರಿದ್ದಾರೆ ಎನ್ನಲಾಗಿದೆ. 

ಚಿಕಿತ್ಸೆ ನೀಡಿದ ವೈದ್ಯರಿಗೆ ಪ್ರಕರಣ ಬಹಿರಂಗಗೊಳಿದಂತೆ, ಅತ್ಯಾಚಾರ ನಡೆದಿಲ್ಲವೆಂದು ಹೇಳಬೇಕೆಂದು ಒತ್ತಡ ಹಾಕಿದ್ದಾರೆ. ವರ್ತೂರು ಠಾಣೆ ಇನ್ಸ್’ಪೆಕ್ಟರ್ ಕೂಡ  ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿದ್ದಾರೆ.  ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.  ಇದೀಗ ವರ್ತೂರು ಪೊಲೀಸರು ಆರೋಪಿಯ ವಿಚಾರಣೆ  ನಡೆಸುತ್ತಿದ್ದಾರೆ. 
 

loader