Asianet Suvarna News Asianet Suvarna News

ಯುಪಿಯಲ್ಲಿ ಕಾಂಗ್ರೆಸ್ ಮುಖಂಡನಿಂದ ಮಹಿಳೆ ಮೇಲೆ ಅತ್ಯಾಚಾರ?

ಕಾಂಗ್ರೆಸ್ ಮುಖಂಡನಿಂದ ಮಹಿಳೆ ಮೇಲೆ ಅತ್ಯಾಚಾರ | ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ | ಇದು ನಿಜನಾ? 

Rape accused on Uttara Pradesh Congress leader
Author
Bengaluru, First Published Sep 1, 2018, 9:18 AM IST

ಬೆಂಗಳೂರು (ಸೆ. 01): ‘ಉತ್ತರ ಪ್ರದೇಶದ ಗೋಂಡಾದ ಮಹಿಳೆಯ ಮೇಲೆ ಕಾಂಗ್ರೆಸ್ ಪಕ್ಷದ ಮುಖಂಡನೊಬ್ಬ ಅತ್ಯಾಚಾರ ಎಸಗಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾನೆ’ ಎಂಬ ಅಡಿಬರಹದೊಂದಿಗೆ ತೀವ್ರವಾಗಿ ಗಾಯಗೊಂಡ ಮಹಿಳೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ಉತ್ತರ ಪ್ರದೇಶದ ಗೋಂಡಾ ಮೂಲದ ನೀರು ಗೌತಮ (27) ಎಂಬ ಈ ಮಹಿಳೆಯು ಈ ರಾಜಕೀಯ ಮುಖಂಡನನ್ನು ಸಹೋದರನೆಂದು ಭಾವಿಸಿದ್ದಳು. ಆದರೆ ಮಹಿಳೆ ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಈತ ಮನೆಗೇ ಬಂದು ಅಮಾನವೀಯವಾಗಿ ಹಲ್ಲೆ ಮಾಡಿ ಅತ್ಯಾಚಾರ ಎಸಗಿದ್ದಾನೆ’ ಎಂದು ಹೇಳಲಾಗಿದೆ. ಆದರೆ ನಿಜಕ್ಕೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋ ಅತ್ಯಾಚಾರ ಸಂತ್ರಸ್ತೆಯದೇ ಎಂದು ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಸಾಬೀತಾಗಿದೆ.

‘ಬೂಮ್’ ಈ ಫೋಟೋದ ಜಾಡು ಹಿಡಿದು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ ಇದು 2 ವರ್ಷ ಹಿಂದಿನ ಚಿತ್ರ ಎಂಬುದು ಪತ್ತೆಯಾಗಿದೆ. ವಾಸ್ತವವಾಗಿ ಅತ್ಯಾಚಾರ ಸಂತ್ರಸ್ತೆಯ ಫೋಟೋ ಎಂದು ವೈರಲ್ ಆಗಿರುವ ಈ ಫೋಟೋ, 2016 ರಲ್ಲಿ ಉತ್ತರಪ್ರದೇಶದ ಕಾನ್ಪುರ ಸಮೀಪ ನಡೆದ ರೈಲು ದುರಂತದಲ್ಲಿ ಗಾಯಗೊಂಡಿದ್ದ ಮಹಿಳೆಯ ಫೋಟೋ. ಇದನ್ನು ಬಳಸಿಕೊಂಡು ಸುಳ್ಳುಸುದ್ದಿ ಹರಡುತ್ತಿರುವುದು ಇದೇ ಮೊದಲೇನಲ್ಲ.

ಈ ಹಿಂದೆ ಕೂಡ ಸಾಕಷ್ಟು ಭಾರಿ ಸುಳ್ಳುಸುದ್ದಿ ಹರಡಲು ಈ ಫೋಟೋವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶ ಪೊಲೀಸರು ಟ್ವೀಟ್ ಮಾಡಿ
ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ. 

-ವೈರಲ್ ಚೆಕ್ 

Follow Us:
Download App:
  • android
  • ios