ಬೆಂಗಳೂರು[ಡಿ.09] ಮಂಡ್ಯದ ಮಾಜಿ ಸಂಸದೆ, ಕಾಂಗ್ರೆಸ್ ಸೋಶಿಯಲ್ ಮೀಡಿಯಾದ ಜವಾಬ್ದಾರಿ ಹೊತ್ತಿರುವ ರಮ್ಯಾ ದಿವ್ಯ ಸ್ಪಂದನ ತಮ್ಮ ಇಸ್ಟಾಗ್ರಾಮ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ ವಿಡಿಯೋ ಹಂಚಿಕೊಂಡಿದ್ದಾರೆ. ಸಂಪೂರ್ಣವಾಗಿ ಎಡಿಟ್ ಮಾಡಿರುವ ವಿಡಿಯೋ ಮೋದಿ ಮತ್ತು ಅಮಿತ್ ಶಾ ಅವರನ್ನು ಅವಹೇಳನ ಮಾಡುವಂತೆ ಇದೆ.

ಹಿಂದೆ ಗ್ರಾಮೋಫೋನ್ ಬರ್ತಿತ್ತು, ಅದರಲ್ಲಿ ಕೆಲವೊಮ್ಮೆ ಸಮಸ್ಯೆಯಾದಾಗ ಹೇಳಿದ್ದ ಹಾಡುಗಳೇ ಪುನರಾವರ್ತನೆ ಆಗುತ್ತಿದ್ದವು ಎಂದು ಮೋದಿ ಭಾಷಣದಲ್ಲಿ ಒಮ್ಮೆ ಹೇಳಿದ ಸಾಲುಗಳು ಮೊದಲಿಗೆ ಉಲ್ಲೇಖವಾಗುತ್ತದೆ. ಇದಾದ ಮೇಲೆ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಬಳಸಿದ ಮಹಾತ್ಮ ಗಾಂಧೀಜಿ, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರುಗಳನ್ನು ರಿಪೀಟ್ ಮಾಡಲಾಗಿದೆ. 

ಮೋದಿಗೆ ಹಕ್ಕಿ ಹಿಕ್ಕೆ ಎಂದ ರಮ್ಯಾಗೆ ಇಕ್ಕಿದ ನೆಟ್ಟಿಗರು!

ಪಟೇಲ್ ಪ್ರತಿಮೆ ಅನಾವರಣದ ನಂತರ ನರೇಂದ್ರ ಮೋದಿ ಅವರ ಫೋಟೋವನ್ನು ಹಂಚಿಕೊಂಡು ಹಕ್ಕಿ ಹಿಕ್ಕೆ ಎಂದು ಬರೆದುಕೊಂಡಿದ್ದಕ್ಕೆ ರಮ್ಯಾ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.