Asianet Suvarna News Asianet Suvarna News

ನಾನೂ ನಗರ ನಕ್ಸಲ್ : ವಿರೋಧವನ್ನು ಬಲವಂತವಾಗಿ ಹತ್ತಿಕ್ಕಲಾಗುತ್ತಿದೆಯಾ?

ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಐವರು ‘ಚಿಂತಕರನ್ನು’ ಬಂಧಿಸಲಾಗಿದೆ. ಅವರನ್ನು ನಗರ ನಕ್ಸಲರು ಎಂದು ಕೆಲವರು ಬ್ರ್ಯಾಂಡ್‌ ಮಾಡಿದ್ದಕ್ಕೆ ಪ್ರತಿಯಾಗಿ ‘ನಾನೂ ನಗರ ನಕ್ಸಲ್‌’ ಎಂದು ಎಡಪಂಥೀಯರು ಹೋರಾಟ ಆರಂಭಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 

Rajyavardhan Singh Rathore opinion on Urban Naxalism
Author
Bengaluru, First Published Sep 7, 2018, 11:57 AM IST

ಬೆಂಗಳೂರು (ಸೆ. 07): ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಐವರು ‘ಚಿಂತಕರನ್ನು’ ಬಂಧಿಸಲಾಗಿದೆ. ಅವರನ್ನು ನಗರ ನಕ್ಸಲರು ಎಂದು ಕೆಲವರು ಬ್ರ್ಯಾಂಡ್‌ ಮಾಡಿದ್ದಕ್ಕೆ ಪ್ರತಿಯಾಗಿ ‘ನಾನೂ ನಗರ ನಕ್ಸಲ್‌’ ಎಂದು ಎಡಪಂಥೀಯರು ಹೋರಾಟ ಆರಂಭಿಸಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರದ ಪ್ರಮುಖ ಸಚಿವ ರಾಜ್ಯವರ್ಧನ್‌ ಟೈಮ್ಸ್‌ ನೌ ಜೊತೆ ವಿಸ್ತೃತವಾಗಿ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ವಿರೋಧವನ್ನು ಬಲವಂತವಾಗಿ ಹತ್ತಿಕ್ಕುತ್ತಿದ್ದೀರಾ?

ರಾಹುಲ್‌ ಗಾಂಧಿಯವರ ಹೇಳಿಕೆಗಳನ್ನು ಕೆಲವೇ ಕೆಲವು ಮಂದಿ ನಂಬುತ್ತಾರೆ. ಒಮ್ಮೊಮ್ಮೆ ನನಗೇ ಅವರ ಬಗ್ಗೆ ಕರುಣೆ ಬರುತ್ತದೆ. ಸ್ವಾತಂತ್ರ್ಯಾನಂತರ ನಮ್ಮ ದೇಶದಲ್ಲಿ ಹಲವಾರು ಸೇನಾ ಒಪ್ಪಂದಗಳು ನಡೆದಿವೆ. ಆಗೆಲ್ಲಾ ರಾಹುಲ್‌ ಗಾಂಧಿ ಬೆಳೆಯುತ್ತಿದ್ದರು. ಈಗ ಪ್ರತಿ ಸೇನಾ ಒಪ್ಪಂದ ನಡೆದಾಗಲೂ ಅಲ್ಲಿ ಹಗರಣ ನಡೆದಿದೆ ಎನ್ನುತ್ತಾರೆ. ವಾಸ್ತವವಾಗಿ ಅವರಿಗೆ ಆ ಬಗ್ಗೆ ಗೊತ್ತೇ ಇರುವುದಿಲ್ಲ. ಅದೊಂದು ರೀತಿಯ ಗೀಳು ಮನೋರೋಗ.

ಕೇಂದ್ರ ಸರ್ಕಾರ ನಗರ ನಕ್ಸಲರು ಎಂದು ಕೆಲವರನ್ನು ಬಂಧಿಸಿತ್ತು. ಅದನ್ನು ವಿಪಕ್ಷಗಳು, ಎಡಪಂಥೀಯರು ಹಾಗೂ ಸಾಮಾಜಿಕ ಹೋರಾಟಗಾರರು ಇದನ್ನು ಖಂಡಿಸುತ್ತಿದ್ದಾರೆ. ಇದು ವಿರೋಧವನ್ನು ಬಲವಂತವಾಗಿ ಹತ್ತಿಕ್ಕುವ ವಿಧಾನವೆ?

ವಿರೋಧ ಪಕ್ಷಗಳು, ಹೋರಾಟಗಾರರು ನಮ್ಮ ವಿರುದ್ಧ ತಿರುಗಿನಿಂತಿದ್ದಾರೆ, ಮಾಧ್ಯಮಗಳನ್ನು ಹಾಗೂ ಅಭಿಪ್ರಾಯಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ನೀವು ಹೇಳುತ್ತಿದ್ದೀರಿ. ಸಾಧ್ಯವಾದಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿದಮೇಲೂ ಪ್ರಧಾನಿಯೊಬ್ಬರನ್ನು ಅವರೆಲ್ಲ ನಿಂದಿಸುತ್ತಿರುವುದು ಕಂಡು ನನಗೂ ಆಶ್ಚರ್ಯವಾಗುತ್ತಿದೆ. ನಮ್ಮ ದೇಶದ ಇತಿಹಾಸದಲ್ಲಿಯೇ ಒಬ್ಬ ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಈ ರೀತಿಯಾಗಿ ಆಕ್ರಮಣ ಮಾಡಿದ, ನಿಂದಿಸಿದ ಉದಾಹರಣೆಗಳು ಇರಲಿಲ್ಲ.

ಆದರೆ ಅದು ಈಗ ನಡೆಯುತ್ತಿದೆ. ಆದಾಗ್ಯೂ ನಮ್ರತೆಯಿಂದ ಎಲ್ಲವನ್ನೂ ಒಪ್ಪಿಕೊಂಡಿದ್ದೇವೆ. ಕಾರಣ, ದೇಶದಲ್ಲಿ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ದೇಶದಲ್ಲೇನಾಗುತ್ತಿದೆ ಎಂದು ಎಲ್ಲರೂ ಮಾಧ್ಯಮಗಳ ಮೂಲಕ ತಿಳಿದುಕೊಂಡರೆ ಯಾರು ಬಲಿಪಶು, ಯಾರು ಆಕ್ರಮಣಕಾರಿ ಎಂಬುದು ತಿಳಿಯುತ್ತದೆ. ಒಂದಂತೂ ಸತ್ಯ, ದೇಶದ ಬಹುಸಂಖ್ಯಾತರು ನಮ್ಮ ಪಕ್ಷದ ಪರವಾಗಿ ನಿಂತಿದ್ದಾರೆ.

ನಿಮ್ಮ ಸರ್ಕಾರ/ ಪ್ರಧಾನಿಯೇ ಬಲಿಪಶು ಎಂದು ನೀವು ಹೇಳುತ್ತಿದ್ದೀರಿ. ಆದರೆ, ನಗರ ನಕ್ಸಲರು ಎಂದು ಯಾರನ್ನು ನೀವು ಕರೆಯುತ್ತಿದ್ದಿರೋ ಅವರನ್ನು ಸುಪ್ರೀಂಕೋರ್ಟ್‌ ಒಂದು ವಾರ ಕಾಲ ಗೃಹಬಂಧನದಲ್ಲಿಡಲು ಮಾತ್ರ ಹೇಳಿತ್ತು. ಆದರೆ ಅದನ್ನೂ ಮೀರಿ ಅವರನ್ನು ಬಂಧಿಸಿದಿರಿ. ಇದು ಯಾವ ರೀತಿಯ ಆಡಳಿತ?

ಪೊಲೀಸರು ಹಲವು ವರ್ಷಗಳಿಂದ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿಯೇ ತರಬೇತಿ ಪಡೆದಿರುತ್ತಾರೆ. ಯಾವುದೇ ಪ್ರಕರಣದ ವಿಚಾರಣೆಗೂ ನಿರ್ದಿಷ್ಟವಿಧಾನವಿರುತ್ತದೆ. ಈ ಪ್ರಕರಣದಲ್ಲಿಯೂ ಯಾವೊಬ್ಬ ಪೊಲೀಸ್‌ ಅಧಿಕಾರಿ ಕೂಡ ತಮ್ಮ ಅಧಿಕಾರ ವ್ಯಾಪ್ತಿ ಮೀರಿಲ್ಲ. ಹಾಗಾಗಿ ನಾವು ನಮ್ಮ ಪೊಲೀಸ್‌ ವ್ಯವಸ್ಥೆ ಮೇಲೆ ನಂಬಿಕೆ ಇಡಬೇಕಾಗುತ್ತದೆ. ಪೊಲೀಸರೇ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ. ಹಾಗಾಗಿ ನಾನೇನೂ ಹೇಳುವುದಿಲ್ಲ.

ನ್ಯಾ. ಚಂದ್ರಚೂಡ್‌ ಅವರು ‘ಅರ್ಬನ್‌ ನಕ್ಸಲ್‌’ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾಗ ‘ಪ್ರಶ್ನಿಸುವುದರಲ್ಲಿಯೇ ಪ್ರಜಾಪ್ರಭುತ್ವದ ಅಸ್ತಿತ್ವವಿದೆ. ಅದಕ್ಕೆ ಅವಕಾಶವಿಲ್ಲದಿದ್ದರೆ ಪ್ರೆಶರ್‌ ಕುಕ್ಕರ್‌ ಸ್ಫೋಟಗೊಳ್ಳುತ್ತದೆ’ ಎಂದಿದ್ದರು. ನಮ್ಮ ಸಮಾಜ ಕೂಡ ಸ್ಫೋಟಕ್ಕೆ ಹತ್ತಿರವಾಗಿದೆಯೇ?

ಅವರು ಹೇಳಿದ್ದು ಸತ್ಯ. ಜಗತ್ತಿನ ಪ್ರತಿ ಸಮಾಜದಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರಲೇಬೇಕು. ಭಿನ್ನಾಭಿಪ್ರಾಯಕ್ಕೂ, ಭಿನ್ನಾಭಿಪ್ರಾಯ ಹತ್ತಿಕ್ಕುವುದಕ್ಕೂ, ದೇಶದ ವಿರುದ್ಧವೇ ಪಿತೂರಿ ನಡೆಸುವುದಕ್ಕೂ ವ್ಯತ್ಯಾಸವಿದೆ. ದೇಶದಲ್ಲಿ ಪೊಲೀಸ್‌, ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ. ಪೊಲೀಸರ ಬಳಿ ಬಲವಾದ ಸಾಕ್ಷ್ಯಗಳಿರಬಹುದು. ಪೊಲೀಸರ ಮೇಲೆ ನಂಬಿಕೆ ಇಡೋಣ.

ಇತ್ತೀಚೆಗೆ ಪುಣೆ ಪೊಲೀಸರು ಪತ್ರಿಕಾಗೋಷ್ಠಿ ಕರೆದು, ಬಂಧಿತ ವಿಲ್ಸನ್‌ ಅವರ ಕಂಪ್ಯೂಟರ್‌ನಲ್ಲಿ ಗ್ರೆನೇಡ್‌ ಲಾಂಚರ್‌ ಇತ್ಯಾದಿ ಮಾಹಿತಿ ಇತ್ತು ಎಂದಿದ್ದರು. ಆದರೆ ಒಬ್ಬರು ದೇಶದ ವಿರುದ್ಧವೇ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲು ಇಷ್ಟುಸಾಕ್ಷ್ಯ ಸಾಕೇ? ಅಥವಾ ಬುದ್ಧಿ ಜೀವಿಗಳನ್ನು ಟಾರ್ಗೆಟ್‌ ಮಾಡಲಾಗುತ್ತಿದೆಯೇ?

ಕಂಪ್ಯೂಟರ್‌ನಲ್ಲಿ ಇಷ್ಟೇ ಶೇಖರಿಸಿಟ್ಟಿದ್ದಾರೆ ಎಂದು ಹೇಗೆ ಗೊತ್ತಾಗುತ್ತದೆ? ಪೊಲೀಸರ ಬಳಿ ಸಾಕ್ಷ್ಯಗಳಿರಬಹುದು, ನೋಡೋಣ. ದೇಶದ ಪ್ರತಿಯೊಬ್ಬರೂ ಸುರಕ್ಷಿತವಾಗಿರಬೇಕು, ದೇಶವನ್ನು ರಕ್ಷಿಸಬೇಕು ಎಂಬುದೇ ನಮ್ಮ ಉದ್ದೇಶ. ಹಾಗಾಗಿ ಕೆಲ ನಿರ್ಬಂಧಗಳಿವೆ. ಅದನ್ನು ಎಲ್ಲರೂ ಅನುಸರಿಸಬೇಕಾಗುತ್ತದೆ.

ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿರುವಾಗಲೇ ಬಿಜೆಪಿ ಪತ್ರಿಕಾಗೋಷ್ಠಿ ಕರೆದು ನಗರ ನಕ್ಸಲರ ಮೇಲಿನ ಶಿಸ್ತುಕ್ರಮ ಸರಿ ಎಂದು ಸಮರ್ಥನೆ ಮಾಡಿಕೊಂಡಿದ್ದೇಕೆ?

ನೀವು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಹೇಳುತ್ತಿದ್ದೀರಿ. ನಮ್ಮ ಪಕ್ಷವೂ ಅದರ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಆದರೆ ಅದು ಸರ್ಕಾರದ ಅಭಿಪ್ರಾಯ ಅಲ್ಲ. ಭಾರತ ಸರ್ಕಾರ ನೀತಿ ನಿಬಂಧನೆಗಳನ್ನು ಅನುಸರಿಸುತ್ತಿದೆ, ಅದು ಪ್ರತಿಕಾಗೋಷ್ಠಿ ಕರೆದಿಲ್ಲ. ದೇಶದಲ್ಲಿ ವಿಭಿನ್ನ ಪಕ್ಷಗಳು, ಸಂಘ-ಸಂಸ್ಥೆಗಳು ಇವೆ. ಯಾರೋ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಕಾಂಗ್ರೆಸ್‌ ಅವರನ್ನು ಸಾಮಾಜಿಕ ಹೋರಾಟಗಾರರು ಎಂದು ಕರೆಯುತ್ತಿದೆ. ಯುಪಿಎ ಸರ್ಕಾರ ಇದ್ದಾಗ ಈ ಐವರಲ್ಲಿ ಮೂವರನ್ನು ಬಂಧಿಸಿತ್ತು. ಈಗ ಅದೇ ಜನರು ವಿಭಿನ್ನ ಹೆಸರಿನಿಂದ ಕರೆಯಲ್ಪಟ್ಟಿದ್ದಾರೆ. ಇದೇ ರೀತಿ ಇನ್ನೊಂದು ಪಕ್ಷ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ. ಹೀಗೆ ಒಂದು ಪಕ್ಷದ ಅಭಿಪ್ರಾಯ ದೇಶದ ನ್ಯಾಯಾಂಗದ ಮೇಲೆ ಪರಿಣಾಮ ಬೀರಲು ಸಾಧ್ಯವೇ?

ದೇಶದಲ್ಲಿ ಆರ್‌ಎಸ್‌ಎಸ್‌ನಂತಹ ಒಂದೇ ಒಂದು ಎನ್‌ಜಿಒಗೆ ಮಾತ್ರ ಸ್ಥಳಾವಕಾಶವಿದೆ. ಉಳಿದ ಹೋರಾಟಗಾರರನ್ನು ಜೈಲಿಗೆ ಕಳಿಸಿ ಎಂದು ರಾಹುಲ್‌ ಗಾಂಧಿ ಹೇಳಿದ್ದಾರಲ್ಲ?

ರಾಹುಲ್‌ ಗಾಂಧಿ ಹೇಳಿದ್ದಕ್ಕೆಲ್ಲಾ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಅವರ ಬಹುತೇಕ ಹೇಳಿಕೆಗಳು ಹಾಸ್ಯಾಸ್ಪದ.

ಆರ್‌ಎಸ್‌ಎಸ್‌ ವಿರುದ್ಧದ ಹೇಳಿಕೆಯೂ ಹಾಸ್ಯಾಸ್ಪದವೇ?

ಹೌದು. ರಾಹುಲ್‌ ಗಾಂಧಿ ಹೇಳಿಕೆಗಳು, ಅವರ ವಾದವನ್ನು ಕೆಲವೇ ಕೆಲವು ಮಂದಿ ನಂಬುತ್ತಾರೆ. ಕೆಲ ಸಮಯ ನನಗೇ ಅವರ ಬಗ್ಗೆ ಕರುಣೆ ಬರುತ್ತದೆ. ಸ್ವಾತಂತ್ರ್ಯಾನಂತರದಲ್ಲಿ ಹಲವಾರು ಸೇನಾ ಒಪ್ಪಂದಗಳು ನಡೆದಿವೆ. ಆಗೆಲ್ಲಾ ರಾಹುಲ್‌ ಗಾಂಧಿ ಬೆಳೆಯುತ್ತಿದ್ದರು. ಈಗ ಪ್ರತಿ ಸೇನಾ ಒಪ್ಪಂದ ನಡೆದಾಗಲೂ ಅಲ್ಲಿ ಹಗರಣ ನಡೆದಿದೆ ಎನ್ನುತ್ತಾರೆ. ವಾಸ್ತವವಾಗಿ ಅವರಿಗೆ ಆ ಬಗ್ಗೆ ಗೊತ್ತೇ ಇರುವುದಿಲ್ಲ. ಅದೊಂದು ರೀತಿಯ ಗೀಳು ಮನೋರೋಗ.

ಸತತ 10 ವರ್ಷಗಳ ಕಾಲ ನಮ್ಮ ಸೇನೆಯಲ್ಲಿ ಯಾವುದೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿರಲಿಲ್ಲ. ಸೈನಿಕರೇ ಹೋರಾಡಿ ದೇಶ ರಕ್ಷಿಸಿದ್ದರು. 2007ರಲ್ಲಿ ಆಗಿನ ಯುಪಿಎ ಸರ್ಕಾರ ಒಪ್ಪಂದಕ್ಕೆ ಬಂದಿದ್ದರೂ 2014ರ ವರೆಗೂ ಸ್ಪಷ್ಟತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗೆ ಮಾಡುತ್ತಾ ಕಾಲ ಕಳೆದರೆ ದೇಶ ಮತ್ತು ಸೈನಿಕರ ಕತೆ ಏನು? ಈಗಲೂ ಹಗರಣ ನಡೆದಿದೆ ಎಂದು ರಾಹುಲ್‌ ಗಾಂಧಿ ತಡೆಯೊಡ್ಡಲು ಯತ್ನಿಸುತ್ತಿದ್ದಾರೆ. ಇದು ಅವರ ನಾಯಕತ್ವ ಗುಣ. ವಾಸ್ತವವಾಗಿ ಇಲ್ಲಿ ಖಾಸಗಿ ವ್ಯಕ್ತಿಗಳು ಅಥವಾ ಕಂಪನಿಗಳಿಗೆ ಅವಕಾಶವಿಲ್ಲ. ಇದು ಸಂಪೂರ್ಣ ಸರ್ಕಾರ ಮತ್ತು ಸರ್ಕಾರಗಳ ನಡುವೆ ನಡೆದ ಒಪ್ಪಂದ.

ರಕ್ಷಣಾ ಒಪ್ಪಂದದಲ್ಲಿ ಖಾಸಗಿ ಕಂಪನಿಗಳ ಹಸ್ತಕ್ಷೇಪ ಇದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆಯಲ್ಲಾ?

ರಫೇಲ್‌ ಬಗ್ಗೆ ಹೇಳುವುದಾದರೆ, ಇದು ಯುಪಿಎ ಸರ್ಕಾರದ ಒಪ್ಪಂದ. ಇದು ಸರ್ಕಾರ-ಸರ್ಕಾರ ನಡುವೆ ನಡೆದ ಒಪ್ಪಂದ. ಇಲ್ಲಿ ಯಾವುದೇ ಖಾಸಗಿ ವ್ಯಕ್ತಿ, ಕಂಪನಿಗಳಿಗೆ ಸಹಭಾಗಿತ್ವ ಇಲ್ಲ. ಆ ಪ್ರಕಾರ ಫ್ರಾನ್ಸ್‌ ಸರ್ಕಾರವೇ ಕಂಪನಿಯನ್ನು ಆಯ್ಕೆ ಮಾಡುತ್ತದೆ. ನೀವೇ ಹೇಳಿ ಭಾರತ ಸರ್ಕಾರ ಹೇಗೆ ಇದರಲ್ಲಿ ಭಾಗಿಯಾಗಲು ಸಾಧ್ಯ?

ಹಾಗಾದರೆ ಅನಿಲ್‌ ಅಂಬಾನಿ ಸಹಿ ಮಾಡಿದ್ದು ಸುಳ್ಳೇ?

ಕಾಂಗ್ರೆಸ್‌ ಆರೋಪ ಮಾಡುತ್ತಿರುವುದೆಲ್ಲಾ ಸುಳ್ಳು. ಬೇಕಾದರೆ ಫ್ರಾನ್ಸ್‌ ಸರ್ಕಾರದ ವಕ್ತಾರರನ್ನೇ ಕೇಳಿ.

ವಿಜಯ್‌ ಮಲ್ಯ, ಮೆಹುಲ್‌ ಚೋಕ್ಸಿ, ನೀರವ್‌ ಮೋದಿ ಎಲ್ಲರೂ ಸರ್ಕಾರಕ್ಕೆ ಪಂಗನಾಮ ಹಾಕಿ ದೇಶಬಿಟ್ಟು ಓಡಿಹೋದರು. ಅವರಿಗೆ ಓಡಿಹೋಗಲು ಬಿಟ್ಟವರು ನೀವೇ ಅಲ್ಲವೇ?

ನೀರವ್‌ ಮತ್ತು ಮಲ್ಯರಂಥವರು ಬ್ಯಾಂಕ್‌ಗಳಿಂದ ಸಾಲ ಪಡೆದರು. ಪ್ರತಿವರ್ಷ ಅದನ್ನು ಕಟ್ಟಿಮತ್ತೆ ಹೊಸ ಸಾಲ ಪಡೆದರು. ಇದು ಹೀಗೇ ಮುಂದುವರೆಯಿತು. ಮೋದಿ ಸರ್ಕಾರ ಬಂದ ಬಳಿಕ ಬ್ಯಾಂಕ್‌ನಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಯಾಯಿತು. ಪರಿಣಾಮ ಮಲ್ಯ, ಮೋದಿ ಓಡಿಹೋದರು. ಈ ಎಲ್ಲಾ ಹಗರಣಗಳೂ ನಡೆದಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ. ನಮ್ಮ ಸರ್ಕಾರ ಖಂಡಿತ ಅವರನ್ನು ವಾಪಸ್‌ ಕರೆತಂದೇ ತರುತ್ತದೆ.

 

Follow Us:
Download App:
  • android
  • ios