ರಜಪೂತ್ ದಾಳಿಗೆ ಕುಸಿದ ಹೈದರಾಬಾದ್ : ಮನೀಶ್ ಪಾಂಡೆ ಅರ್ಧ ಶತಕ
ಓವರ್’ಗಳಲ್ಲಿಯೇ ಮೂವರು ಆಟಗಾರರನ್ನು ರಜಪೂತ್ ಪೆವಿಲಿಯನ್’ಗೆ ಕಳುಹಿಸಿದರು. ಕನ್ನಡಿಗ ಬ್ಯಾಟ್ಸ್’ಮೆನ್ ಮನೀಶ್ ಪಾಂಡೆ ಹಾಗೂ ಶಕೀಬ್ ಅಲ್ ಹಸನ್ ಜೋಡಿ 4ನೇ ವಿಕೇಟ್ ನಷ್ಟಕ್ಕೆ 13.4 ಓವರ್’ಗಳಲ್ಲಿ 79 ರನ್ ಪೇರಿಸಿದರು
ಹೈದರಾಬಾದ್(ಏ.26): ರಜಪೂತ್ 15/5 ದಾಳಿಗೆ ಕುಸಿದ ಸನ್ ರೈಸರ್ರ್ ಹೈದರಾಬಾದ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 133 ರನ್ ಸಾಧಾರಣ ಗುರಿ ನೀಡಿದೆ.
ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಆರ್.ಅಶ್ವಿನ್ ಹೈದರಾಬಾದ್ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. 5 ಓವರ್’ಗಳಲ್ಲಿಯೇ ಮೂವರು ಆಟಗಾರರನ್ನು ರಜಪೂತ್ ಪೆವಿಲಿಯನ್’ಗೆ ಕಳುಹಿಸಿದರು. ಕನ್ನಡಿಗ ಬ್ಯಾಟ್ಸ್’ಮೆನ್ ಮನೀಶ್ ಪಾಂಡೆ ಹಾಗೂ ಶಕೀಬ್ ಅಲ್ ಹಸನ್ ಜೋಡಿ 4ನೇ ವಿಕೇಟ್ ನಷ್ಟಕ್ಕೆ 13.4 ಓವರ್’ಗಳಲ್ಲಿ 79 ರನ್ ಪೇರಿಸಿದರು. ರೆಹಮಾನ್ ಬೌಲಿಂಗ್’ನಲ್ಲಿ ಶಕೀಬ್(28) ಔಟಾದ ನಂತರ ಯುಸೀಫ್ ಪಠಾಣ್’(21)ಗೆ ಜೋಡಿಯಾದ ಪಾಂಡೆ ತಂಡದ ಮೊತ್ತ 132 ದಾಖಲಿಸುವಲ್ಲಿ ಯಶಸ್ವಿಯಾದರು. ಮನೀಶ್ 54 ರನ್’ಗಳ ಆಟದಲ್ಲಿ 1 ಸಿಕ್ಸ್’ರ್ ಹಾಗೂ 3 ಬೌಂಡರಿಗಳಿದ್ದವು.
ಸ್ಕೋರ್
ಸನ್ ರೈಸರ್ರ್ ಹೈದರಾಬಾದ್ 20 ಓವರ್’ಗಳಲ್ಲಿ 132 /5
(ಮನೀಶ್ ಪಾಂಡೆ , ಶಕೀಬ್ 28, ಯೂಸೆಫ್ 21 , ರಜಪೂತ್ 15/5 )
ಪಂಜಾಬ್ ವಿರುದ್ಧದ ಪಂದ್ಯ
(ವಿವರ ಅಪೂರ್ಣ)