ನವದೆಹಲಿ(ಡಿ.06): ಸಮಾಜದಲ್ಲಿ ಅತ್ಯಾಚಾರ ಹೆಚ್ಚಾಗಲು ಟಿವಿ ಮತ್ತು ಮೊಬೈಲ್​​ ಫೋನ್​ಗಳೇ ಬಳಕೆಯೇ ಕಾರಣ ಎಂದು ಈ ಸಚಿವ ಮಹಶಯ ಕಂಡು ಹಿಡಿದಿದ್ದಾರೆ.

ಜೈಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ರಾಜಸ್ಥಾನ ಸರ್ಕಾರದ ಸಚಿವ ಬನ್ವರ್​​ಲಾಲ್ ಮೇಘವಾಲ್, ಟಿವಿ ಮತ್ತು ಫೋನ್​​ ಇಲ್ಲದ ಕಾಲದಲ್ಲಿ ಯಾವುದೇ ಅತ್ಯಾಚಾರ ನಡೆಯುತ್ತಿರಲಿಲ್ಲ. ತಂತ್ರಜ್ಞಾನವೇ ಇಂಥ ಕೃತ್ಯ ಮಾಡಲು ಕಾರಣವಾಗುತ್ತಿದೆ ಎಂದು ಸಂಶೋಧನಾ ವರದಿ ನೀಡಿದ್ದಾರೆ.

ಟಿವಿ ಮತ್ತು ಮೊಬೈಲ್​​​ಗಳಲ್ಲಿ ಪ್ರಚೋದನಕಾರಿ ದೃಶ್ಯಗಳು ಸುಲಭವಾಗಿ ಸಿಗುತ್ತಿರುವುದು ಕಳವಳ ತಂದಿದೆ. ವಿದೇಶಗಳಲ್ಲಿ ಅತ್ಯಾಚಾರಿಗಳ ಮರ್ಮಾಂಗ ಕತ್ತರಿಸುತ್ತಾರೆ ಇಲ್ಲವೇ ಸಾರ್ವಜನಿಕವಾಗಿ ಶೂಟ್ ಮಾಡುತ್ತಾರೆ. ಹಾಗಯೇ ಭಾರತದಲ್ಲೂ ಯಾವುದಾದರೂ ಕಠಿಣ ಕಾನೂನು ತರಬೇಕು ಎಂದೂ ಬನ್ವರ್​​ಲಾಲ್ ಮೇಘವಾಲ್​​​ ಹೇಳಿದ್ದಾರೆ.

ಡಿಸೆಂಬರ್ 9ರವರೆಗೆ ಅತ್ಯಾಚಾರಿಗಳ ಅಂತ್ಯಕ್ರಿಯೆ ಇಲ್ಲ

ಅಪರಾಧಿಗಳಿಗೆ ಮೂರು ತಿಂಗಳಿನೊಳಗಾಗಿ ಶಿಕ್ಷೆಯಾಗಬೇಕು. ಈ ಬಗ್ಗೆ ತ್ವರಿತವಾಗಿ ಕಾನೂನು ರೂಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸುತ್ತೇನೆ ಎಂದು ಸಚಿವರು ಹೇಳಲು ಮರೆಯಲಿಲ್ಲ.

ತೆಲಂಗಾಣ ಮೂಲದ ಪಶುವೈದ್ಯೆ ಮೇಲೆ ನಾಲ್ವರು ಕಾಮಿಗಳು ಅತ್ಯಾಚಾರ ಮಾಡಿದ್ದರು. ದೇಶಾದ್ಯಂತ ಘಟನೆಗೆ ಆಕ್ರೋಶ ಇತ್ತು. ಈ ನಡುವೆ ಮರುಸೃಷ್ಟಿಗೆ ಎಂದು ತೆರಳಿದಾಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನ ಮಾಡಿದಾಗ ನಾಲ್ವರನ್ನು ಎನ್ ಕೌಂಟರ್ ಮಾಡಲಾಗಿತ್ತು.