Asianet Suvarna News Asianet Suvarna News

ರಾಜಮೌಳಿ ಮಗನ ಮದುವೆಗೆ ಬಾಹುಬಲಿಯ ಡಾನ್ಸ್, ದೇವಸೇನಾ ಹೀಗೆ ಕೊಟ್ರು ಎಂಟ್ರಿ!

ಬಾಲಿವುಡ್ ತಾರೆಯರ ಬಳಿಕ ಇದೀಗ ಬಾಹುಬಲಿ ಸಿನಿಮಾ ನಿರ್ದೇಶಕ ಎಸ್. ಎಸ್. ರಾಜಮೌಳಿ ಮಗನ ಮದುವೆ ಅದ್ಧೂರಿಯಾಗಿ ನಡೆಯುತ್ತಿದ್ದು, ಇಲ್ಲಿನ ವಿಡಿಯೋ ತುಣುಕುಗಳು ವೈರಲ್ ಆಗುತ್ತಿವೆ. ಇವುಗಳಲ್ಲಿ ಬಾಹುಬಲಿ ಪ್ರಭಾಸ್ ಹಾಗೂ ದೇವಸೇನಾ- ಅನುಷ್ಕಾ ಶೆಟ್ಟಿಯ ಎಂಟ್ರಿ ಜನರ ಗಮನ ಸೆಳೆಯುತ್ತಿದೆ.

rajamouli baahubali director son wedding jaipur prabhas anushka shetty ram charan dance video
Author
Jaipur, First Published Dec 29, 2018, 3:50 PM IST
  • Facebook
  • Twitter
  • Whatsapp

ನವದೆಹಲಿ[ಡಿ.29]: ಬಾಲಿವುಡ್ ತಾರೆಯರ ಮದುವೆ ಸೀಜನ್ ಬಳಿಕ ಈಗ ದಕ್ಷಿಣ ಭಾರತೀಯರ ಸರದಿ. 'ಬಾಹುಬಲಿ' ಸಿನಿಮಾ ನಿರ್ದೇಶಕ ಎಸ್. ಎಸ್ ರಾಜಮೌಳಿ ಮಗನ ಮದುವೆ ಜೈಪುರದಲ್ಲಿ ಭಾರೀ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಅದ್ಧೂರಿ ಮದುವೆಗೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ದಿಗ್ಗಜ ನಟರು ತೆರಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಾಹುಬಲಿ ಸಿನಿಮಾ ನಿರ್ದೇಶಕ ರಾಜಮೌಳಿ ಮಗನ ಮದುವೆ ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ದಕ್ಷಿಣ ಭಾರತ ಸಿನಿ ಕ್ಷೇತ್ರದ ದಿಗ್ಗಜರಾದ ರಾಮ್ ಚರಣ್, ಪ್ರಭಾಸ್, ರಾಣಾ ದಗ್ಗುಬಾಟಿ ಹಾಗೂ ಅನುಷ್ಕಾ ಶೆಟ್ಟಿ ಭರ್ಜರಿಯಾಗಿ ಸ್ಟೆಪ್ಸ್ ಹಕಿರುವುದು ಕಂಡು ಬಂದಿದೆ.

 
 
 
 
 
 
 
 
 
 
 
 
 

#Rajamouli #Ramcharan Dance at #BangaramSaysSS

A post shared by Telugu Cinema (@allabouttollywood) on Dec 28, 2018 at 9:58am PST

ರಾಜಮೌಳಿ ಮಗ ಕಾರ್ತಿಕೇಯ ಮಗನ ಮದುವೆ ದಕ್ಷಿಣ ಭಾರತದ ಪ್ರಸಿದ್ಧ ಗಾಯಕಿ ಪೂಜಾ ಪ್ರಸಾದ್ ಜೊತೆ ನಡೆಯುತ್ತಿದೆ. ಇಬ್ಬರ ನಿಶ್ಚಿತಾರ್ಥ 2018ರ ನವೆಂಬರ್ ನಲ್ಲಿ ನಡೆದಿದ್ದು, ಡಿಸೆಂಬರ್ 30 ರಂದು ಇವರು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.

ಮದುವೆ ಸಂಪ್ರದಾಯಗಳು ಈಗಾಗಲೆ ಆರಂಭವಾಗಿದ್ದು, ಬಾಹುಲಬಲಿ ಸಿನಿಮಾದ ಇಡೀ ತಂಡ ಜೈಪುರಕ್ಕೆ ತಲುಪಿದೆ. ಮೂರು ದಿನಗವರೆಗೆ ಎಲ್ಲಾ ಸಂಪ್ರದಾಯಗಳು ನಡೆಯಲಿವೆ. ಈಗಾಗಲೇ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಹಾಗೂ ರಣವೀರ್ ಸಿಂಗ್ ದೀಪಿಕಾ ಪಡುಕೋಣೆ ಮತ್ತು ಮುಕೆಶ್ ಅಂಬಾನಿ ಮಗಳು ಇಶಾ ಅಂಬಾನಿ ಹಾಗೂ ಆನಂದ್ ಪೀರಾಮಲ್ ಅದ್ಧೂರಿ ಮದುವೆ ಸಂಭ್ರಮ ೆಲ್ಲರ ಗಮನ ಸೆಳೆದಿತ್ತು. ಹೀಗಿರುವಾಗ ಅತ್ಯಂತ ಹೆಚ್ಚು ಆದಾಯ ಗಳಿಸಿರುವ ಬಾಹುಬಲಿ ಸಿನಿಮಾ ನಿರ್ದೇಶಕರ ಮಗನ ಮದುವೆ ಸಂಭ್ರಮ ಎಲ್ಲರ ಗಮನ ಸೆಳೆದಿದೆ ಎಂಬುವುದರಲ್ಲಿ ಅನುಮಾನವಿಲ್ಲ.

Follow Us:
Download App:
  • android
  • ios