ಉದಯಪುರ್(ನ.30): ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗ್ಯಾಂಗ್‌ಸ್ಟರ್‌ಗಳೆಂದು ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಮತ್ತೊಂದು ವಿವಾದಾತ್ಮಾಕ ಹೇಳಿಕೆ ನೀಡಿದ್ದಾರೆ.

ರಾಜಸ್ತಾನದ ಉದಯಪುರ್ ದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ ಬಬ್ಬರ್, ಗುಜರಾತ್ ನಿಂದ ಬಂದಿರುವ ಈ ಇಬ್ಬರು ನಾಯಕರು, ಬಡ ಜನರನ್ನು ಕೊಲ್ಲುವ ಉದ್ದೇಶದಿಂದ ಗುಂಪು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು.

‘ಗುಜರಾತ್‌ನ ಇಬ್ಬರು ಗ್ಯಾಂಗ್‌ಸ್ಟರ್‌ ಗಳಿದ್ದಾರೆ. ಇವರಲ್ಲಿ ಒಬ್ಟಾತ ಪಕ್ಷವೊಂದರಅಧ್ಯಕ್ಷರೂ ಆಗಿದ್ದಾರೆ. ಇವರು ನಡೆಸುತ್ತಿರುವ ಗ್ಯಾಂಗ್‌ ಬಡಜನರನ್ನು ಕೊಲ್ಲುವುದರಲ್ಲಿ ನಿರತವಾಗಿದೆ' ಎಂದು ರಾಜ್‌ ಬಬ್ಬರ್‌ ಹೇಳಿದ್ದಾರೆ.

ಉತ್ತರ ಪ್ರದೇಶ ಕಾಂಗ್ರೆಸ್‌ ಮುಖ್ಯಸ್ಥರಾಗಿರುವ ರಾಜ್‌ ಬಬ್ಬರ್‌, ಪ್ರಧಾನಿ ಮೋದಿ ಅವರ ಆರ್ಥಿಕ ನೀತಿಗಳ ಫ‌ಲವನ್ನು ಟೀಕಿಸುವಾಗ ಈ ಹಿಂದೆ ಅನಗತ್ಯವಾಗಿ ಮೋದಿ ತಾಯಿಯನ್ನು ಉಲ್ಲೇಖೀಸಿ ವಿವಾದ ಸೃಷ್ಟಿಸಿದ್ದರು.