ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಅಮೇಠಿಯಲ್ಲಿ ಸೋಲುವ ಭಯದಿಂದ ಬೀದರ್‌ನಲ್ಲಿ ಚುನಾವಣೆ ಎದುರಿಸಲಿದ್ದಾರೆ ಎಂಬ ಮಾಹಿತಿ ಇದೆ. ಅವರು ಬೀದರ್‌ನಲ್ಲಿ ನಿಂತರೂ ಸೋಲುವುದು ಖಚಿತ ಎಂದು ವಿಧಾನಪರಿಷತ್‌ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ತಿಳಿಸಿದರು.

ರಾಹುಲ್‌ಗಾಂಧಿ ಒಬ್ಬ ಅಪ್ರಬುದ್ಧ ನಾಯಕ ಎಂಬುದು ಜಗತ್ತಿಗೇ ಗೊತ್ತಿದೆ. ಅಂತಹವರ ಕೈಯಲ್ಲಿ ದೇಶವನ್ನು ಕೊಡಲು ಜನತೆ ಇಷ್ಟಪಡುವುದಿಲ್ಲ. ಅವರು ಅಮೇಠಿಯಲ್ಲೂ ಸೋಲುತ್ತಾರೆ. ಒಂದು ವೇಳೆ ಬೀದರ್‌ನಲ್ಲಿ ಚುನಾವಣೆ ಎದುರಿಸಿದರೆ ಇಲ್ಲೂ ಸೋಲುತ್ತಾರೆ ಎಂದರು.