ಭುವನೇಶ್ವರ್(ಜ.25)​: ‘ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಭಿನ್ನಾಭಿಪ್ರಾಯಗಳಿವೆ. ನಾನು ಅವರ ವಾದ ಒಪ್ಪುವುದಿಲ್ಲ. ಅವರು ನನ್ನ ವಾದ ಒಪ್ಪುವದಿಲ್ಲ. ಅವರನ್ನು ಮತ್ತೆ ಪ್ರಧಾನಿಯಾಗಲು ನಾನು ಬಿಡುವುದಿಲ್ಲ. ಆದರೆ ಅವರನ್ನು ದ್ವೇಷಿಸುವುದಿಲ್ಲ..’ಇವು ರಾಹುಲ್ ಗಾಂಧಿ ಅವರ ಸ್ಪಷ್ಟ ನುಡಿಗಳು.

ಭುವನೇಶ್ವರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ ರಾಹುಲ್, ‘ಒಂದು ವಿಷಯ ನನಗೆ ಅರಿವಾಗಿದೆ. ಪ್ರಧಾನಿ ಮೋದಿ ನನ್ನೊಂದಿಗೆ ಸಹಮತ ಹೊಂದಿಲ್ಲ. ನಾನೂ ಕೂಡಾ ಅವರನ್ನು ಒಪ್ಪಿಕೊಳ್ಳಲ್ಲ. ಮತ್ತು ಅವರ ವಿರುದ್ಧ ಹೋರಾಟವನ್ನ ಮುಂದುವರೆಸುತ್ತೇನೆ. ಅವರನ್ನು ಪ್ರಧಾನಿಯಾಗಲು ಬಿಡುವುದಿಲ್ಲ. ಆದರೆ ಅವರನ್ನು ನಾನು ಎಂದಿಗೂ ದ್ವೇಷಿಸುವುದಿಲ್ಲ. ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುತ್ತೇನೆ’. ಎಂದು ರಾಹುಲ್​ ಹೇಳಿದ್ದಾರೆ.

ಬಿಜೆಪಿ ಮತ್ತು ಆರ್​ಎಸ್​ಎಸ್​​ನಿಂದ ನಾನು ಪಡೆದ ಬಹುದೊಡ್ಡ ಕೊಡುಗೆ ನಿಂದನೆ ಮತ್ತು ಅವಮಾನ ಎಂದು ರಾಹುಲ್ ಹೇಳಿದರು. ಪ್ರಧಾನಿ ಮೋದಿ ಅವರು ನನ್ನನ್ನು ನಿಂದಿಸಿದಷ್ಟೂ ನಾನು ಅವರನ್ನು ಅಪ್ಪಿಕೊಳ್ಳಲು ಇಷ್ಟ ಪಡುತ್ತೇನೆ ಎಂದು ರಾಹುಲ್​ ಹೇಳಿದ್ದಾರೆ.