ಉಡುಪಿ(ನ.29)  ದತ್ತಾತ್ರೇಯ ಗೋತ್ರದ ರಾಹುಲ್ ಗಾಂಧಿ ದತ್ತಪೀಠಕ್ಕೆ ಬರಲಿ ಎಂದು ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಟ್ವೀಟ್ ಮಾಡಿ ಆಹ್ವಾನ ನೀಡಿದ್ದಾರೆ. ಡಿಸೆಂಬರ್ 22 ರಂದು ದತ್ತ ಜಯಂತಿ ಉತ್ಸವ ನಡೆಯಲಿದ್ದು  ಅದಕ್ಕೆ ಆಗಮಿಸಬೇಕು ಎಂದು ರಾಹುಲ್ ಗಾಂಧಿಗೆ ಬಿಜೆಪಿ ಶಾಸಕ‌,ಮುಖ್ಯ ಸಚೇತಕ ಸುನಿಲ್ ಕುಮಾರ್ ಆಹ್ವಾನ ನೀಡಿದ್ದಾರೆ.

40 ವರ್ಷಗಳ ಬಳಿಕ‌ ನಿಮ್ಮ ಗೋತ್ರದ ಘೋಷಣೆಯಾಗಿದೆ ದತ್ತಾತ್ರೇಯ ಗೋತ್ರದ ನೀವು‌ ದತ್ತಪೀಠಕ್ಕೆ ಬರಬೇಕು ದತ್ತಜಯಂತಿಯಲ್ಲಿ ನಮ್ಮ‌ ಜೊತೆ ಪಾಲ್ಗೊಳ್ಳಬೇಕು. ದತ್ತಪೀಠದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿ ಎಂದು ಆಗ್ರಹಿಸಿದ್ದಾರೆ.

ರಾಹುಲ್ ಗಾಂಧಿ ಕಾಶ್ಮೀರಿ ಬ್ರಾಹ್ಮಣ?: ಗೋತ್ರ ಬಹಿರಂಗ

ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ವೇಳೆ ದೇವಾಲಯಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ  ತಮ್ಮದು ದತ್ತಾತ್ರೇಯ ಗೋತ್ರ, ಕೌಲ್ ಬ್ರಾಹ್ಮಣ ಕುಲ ಎಂದು ದೇವಾಲಯದ ಅರ್ಚಕರ ಬಳಿ ಹೇಳಿಕೊಂಡಿದ್ದರು. ನಂತರ ಇದನ್ನು ಎಲ್ಲ ಮಾಧ್ಯಮಗಳು ವರದಿ ಮಾಡಿದ್ದವು.