ಭುವನೇಶ್ವರ್(ಜ.25): ತಮ್ಮ ಫೋಟೋ ಕ್ಲಿಕ್ಕಿಸಲು ಮುಂದಾದ ಫೋಟೋಗ್ರಾಫರ್ ಓರ್ವ ಆಯತಪ್ಪಿ ಬಿದ್ದ ಪರಿಣಾಮ, ಖುದ್ದು ರಾಹುಲ್ ಗಾಂಧಿ ಆತನನ್ನು ಮೇಲೆತ್ತಿದ ಘಟನೆ ಭುವನೇಶ್ವರ್‌ದಲ್ಲಿ ನಡೆದಿದೆ.

ಸಮಾರಂಭವೊಂದರಲ್ಲಿ ಭಾಗವಹಿಸಲು ಭುವನೇಶ್ವರ್  ಏರ್‌ಪೋರ್ಟ್‌ಗೆ ಬಂದಿಳಿದ ರಾಹುಲ್, ಕಾರು ಹತ್ತುವ ವೇಳೆ ಫೋಟೋಗ್ರಾಫರ್ ಓರ್ವ ಅವರ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದಾನೆ.

ಈ ವೇಳೆ ಆಯತಪ್ಪಿ ರಸ್ತೆಯ ಇನ್ನೊಂದು ಬದಿಗೆ ಬಿದ್ದ ಫೋಟೋಗ್ರಾಫರ್‌ನನ್ನು ಮೇಲೆತ್ತಿದ ರಾಹುಲ್, ಪೆಟ್ಟು ಬಿತ್ತಾ ಎಂದು ಪ್ರಶ್ನಿಸಿದ್ದಾರೆ. ಅದೃಷ್ಟವಶಾತ್ ಫೋಟೋಗ್ರಾಫರ್‌ಗೆ ಹೆಚ್ಚಿನ ಗಾಯಗಳಾಗಿಲ್ಲ.

ಇನ್ನು ಕೆಳಗೆ ಬಿದ್ದ ಫೋಟೋಗ್ರಾಫರ್‌ನನ್ನು ಮೇಲೆತ್ತಿದ್ದ ರಾಹುಲ್ ಗಾಂಧಿ ವಿಡಿಯೋ ಭಾರೀ ವೈರಲ್ ಆಗಿದ್ದು, ರಾಹುಲ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.