Asianet Suvarna News Asianet Suvarna News

ಪುನೀತ್ ಹೆಸರಲ್ಲಿ ಉಚಿತ ಸ್ಕೂಲ್, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾತು: ನ.9ರ ಟಾಪ್ 10 ಸುದ್ದಿ!

ಪ್ರಧಾನಿ ಮೋದಿ ಕುರಿತು ಅಚ್ಚರಿ ವಿಚಾರವನ್ನು ನೌಕರಿ ಡಾಟ್‌ಕಾಮ್ ಸಂಸ್ಥಾಪಕ ಹಂಚಿಕೊಂಡಿದ್ದಾರೆ. ನಾಯಕತ್ವ ಬದಲಾವಣೆ ಬಗ್ಗೆ ಮಹತ್ವದ ಮಾಹಿತಿಯನ್ನು ಉಸ್ತುವಾರಿ ಸಚಿವ ಬಿಚ್ಚಿಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಉಚಿತ ವಸತಿ ಶಾಲೆ ಹಾಗೂ ಆಸ್ಪತ್ರೆ ನಿರ್ಮಿಸುವುದಾಗಿ ಜನಾರ್ದನ್ ರೆಡ್ಡಿ ಘೋಷಿಸಿದ್ದಾರೆ. ಅಂಬಾನಿ ಮನೆ ವಿಳಾಸ ಕೇಳಿದ ಶಂಕಿತ ಅರೆಸ್ಟ್,, ಪೂನಂ ಪಾಂಡೆ ಮೇಲೆ ಹಲ್ಲೆ ಮಾಡಿದ ಪತಿ ಬಂಧನ ಸೇರಿದಂತೆ ನವೆಂಬರ್ 9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Puneeth Rajkumar Free School to Karnataka bjp top 10 News of November 9 ckm
Author
Bengaluru, First Published Nov 9, 2021, 4:40 PM IST
  • Facebook
  • Twitter
  • Whatsapp

 Padma Award: ಪುರಸ್ಕೃತರನ್ನು ಭೇಟಿಯಾದ ಮೋದಿ, ಅಚ್ಚರಿಯ ವಿಚಾರ ಶೇರ್ ಮಾಡಿದ naukri.com ಸಂಸ್ಥಾಪಕ!

Puneeth Rajkumar Free School to Karnataka bjp top 10 News of November 9 ckm

ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 141 ಜನರಿಗೆ 2020 ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದಾರೆ. ಇವರಲ್ಲಿ, ದೇಶದ ಪ್ರಮುಖ ಉದ್ಯೋಗ ವೆಬ್‌ಸೈಟ್ ನೌಕ್ರಿ ಡಾಟ್ ಕಾಮ್ (Naukri.com) ಸಂಸ್ಥಾಪಕ ಮತ್ತು ಉಪಾಧ್ಯಕ್ಷ ಸಂಜೀವ್ ಬಿಖ್‌ಚಂದಾನಿ (Sanjeev Bikhchandani) ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಮಾರಂಭದ ಬಳಿಕ ಪ್ರಧಾನಿ ನರೇಂದ್ರ ಮೋದಿ (Prime Minister narendra Modi) ಪ್ರಶಸ್ತಿ ಪುರಸ್ಕೃತರನ್ನು ಭೇಟಿ ಮಾಡಿದ್ದಾರೆ.

ನಾಯಕತ್ವ ಬದಲಾವಣೆ ಬಗ್ಗೆ ಮಹತ್ವದ ಮಾಹಿತಿ ಬಿಚ್ಚಿಟ್ಟ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್!

Puneeth Rajkumar Free School to Karnataka bjp top 10 News of November 9 ckm

ರಾಜ್ಯದಲ್ಲಿ ನಾಯಕತ್ವ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ (BJP National Secretary Arun Singh), ಪ್ರತಿಪಕ್ಷ ಕಾಂಗ್ರೆಸ್‌ ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಆಪಾದಿಸಿದ್ದಾರೆ.

ಅಂಬಾನಿ ಮನೆ ವಿಳಾಸ ಕೇಳಿದ ಶಂಕಿತ ಅರೆಸ್ಟ್, ಬಯಲಾಯ್ತು ಅಡ್ರೆಸ್ ಕೇಳಿದ ರಹಸ್ಯ!

Puneeth Rajkumar Free School to Karnataka bjp top 10 News of November 9 ckm

ಭಾರತದ ನಂ.1 ಶ್ರೀಮಂತ ಮುಖೇಶ್‌ ಅಂಬಾನಿ (Mukesh Ambani) ಅವರ ಮನೆ ವಿಳಾಸವನ್ನು ಇಬ್ಬರು ಅನಾಮಿಕ ವ್ಯಕ್ತಿಗಳು ಕೇಳಿದರು ಎಂಬ ಸುದ್ದಿ ಭಾರೀ ಸದ್ದು ಮಾಡಿದ್ದು, ಆ್ಯಂಟೀಲಿಯಾ ನಿವಾಸದ ಬಳಿ ಮತ್ತೆ ಹೈಅಲರ್ಟ್‌ (High Alert) ಘೋಷಿಸಿ, ಹೆಚ್ಚಿನ ಭದ್ರತೆ ಒದಗಿಸಲಾಗಿದೆ

Break up with Shubmam Gill: ಸಾರಾ ತೆಂಡೂಲ್ಕರ್‌ಗೆ ನೆಟ್ಟಿಗರ ಪ್ರಶ್ನೆ!

Puneeth Rajkumar Free School to Karnataka bjp top 10 News of November 9 ckm

ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಅವರು ತಮ್ಮ ಸೌಂದರ್ಯ ಮತ್ತು ಲುಕ್‌ನಿಂದ  ಯಾವಾಗಲೂ ಜನಮನದಲ್ಲಿರುತ್ತಾರೆ. ಕೆಲವೊಮ್ಮೆ ಅವರು  ಮುಂಬೈನ ಬೀದಿಗಳಲ್ಲಿ ಕಾಣಿಸಿಕೊಂಡರೆ, ಕೆಲವೊಮ್ಮೆ ಸಾಮಾಜಿಕ ಮಾಧ್ಯಮಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ.

ಹಲ್ಲೆ: ನಟಿ Poonam Pandey ಆಸ್ಪತ್ರೆಗೆ ದಾಖಲು, ಪತಿ ಬಂಧನ

Puneeth Rajkumar Free School to Karnataka bjp top 10 News of November 9 ckm

ಬಾಲಿವುಡ್ (Bollywood) ಮಾದಕ ನಟಿ, ಸೆನ್ಸೇಷನ್‌ ಕ್ರಿಯೇಟರ್ ಪೂನಂ ಪಾಂಡೆ (Poonam Pandey) ವೈವಾಹಿಕ ಜೀವನಕ್ಕೆ ಕಾಲಿಟ್ಟ ದಿನದಿಂದಲೂ ಸಣ್ಣ ಪುಟ್ಟ ಕಾರಣಕ್ಕೆ ಜಗಳವಾಡುತ್ತಾರೆ. ಪೊಲೀಸರಿಗೆ ದೂರು ನೀಡಿ, ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸ್ (Breaking news) ಆಗುವವರೆಗೂ ಇವರಿಬ್ಬರು ಜಗಳ ನಿಲ್ಲಿಸುವುದಿಲ್ಲ. ಈ ಹಿಂದೆಯೂ ಇಬ್ಬರು ಕಿತ್ತಾಡಿಕೊಂಡಿದ್ದರು. ಮಧ್ಯದಲ್ಲಿ ಸುಮ್ಮನಾಗಿದ್ದಾರೆ ಎಂದು ಕೊಂಡರೆ, ಮತ್ತೆ ಗಂಡ ಹೆಂಡಿರ ಜಗಳ ಬೀದಿಗೆ ಬಂದಿದೆ. 

ಕರುಣಾನಿಧಿ, MGR ನಿಧನರಾದಗಲೂ ಅಪ್ಪು ನಿಧನ ಸಂದರ್ಭ ಕಂಡ ಭಕ್ತಸಾಗರ ಕಂಡಿರಲಿಲ್ಲ ಎಂದ ನಕ್ಕೀರನ್

Puneeth Rajkumar Free School to Karnataka bjp top 10 News of November 9 ckm

ಪತ್ರಕರ್ತ ನಕ್ಕೀರನ್ (Nakkheeran Gopal) ಅಪ್ಪು ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ತಮಿಳು ಮಕ್ಕಳಿಗೆ ಪುನೀತ್ ರಾಜ್‌ಕುಮಾರ್ ಆದರ್ಶಗಳನ್ನು ತಿಳಿಸಿದ್ದಾರೆ ನಕ್ಕೀರನ್. ನಕ್ಕೀರನ್ ಮನೆಗೆ ಬಂದಾಗ ಶಿವರಾಜ್‌ ಕುಮಾರ್ ಅವರಲ್ಲಿ ಹೇಳಿದ್ದೇನು ?

ಪುನೀತ್‌ ಹೆಸರಲ್ಲಿ ಉಚಿತ ವಸತಿ ಶಾಲೆ, ಆಸ್ಪತ್ರೆ ನಿರ್ಮಾಣ : ಜನಾರ್ದನ ರೆಡ್ಡಿ ಘೋಷಣೆ

Puneeth Rajkumar Free School to Karnataka bjp top 10 News of November 9 ckm

 ದೈಹಿಕವಾಗಿ ನಮ್ಮನ್ನಗಲಿದ್ದರೂ ಕರುನಾಡಿನ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ನಟ ಪುನೀತ್‌ ರಾಜ್‌ಕುಮಾರ್‌  (Puneeth rajkumar) ಅವರ ಹೆಸರಿನಲ್ಲಿ ಬಳ್ಳಾರಿಯಲ್ಲಿ (ballary) ಬಡ ವಿದ್ಯಾರ್ಥಿಗಳಿಗೆ (Students) ಉಚಿತ ವಸತಿಯುತ ಶಾಲೆ (school) ಹಾಗೂ ಜನಾರೋಗ್ಯಕ್ಕಾಗಿ ಸುಸಜ್ಜಿತ ಆಸ್ಪತ್ರೆ (Hospital) ನಿರ್ಮಿಸಲಾಗುವುದು. ಈ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ (janardhan reddy) ತಿಳಿಸಿದರು.

ಕನ್ನಡಗರೊಂದಿಗೆ ಕನ್ನಡದಲ್ಲಿ ಸಂವಾದ ನಡೆಸಲು ಕೂ ಖಾತೆ ತೆರೆದ ಕರ್ನಾಟಕ ಬಿಜೆಪಿ

Puneeth Rajkumar Free School to Karnataka bjp top 10 News of November 9 ckm

ಸ್ಥಳೀಯ ಜನರೊಂದಿಗೆ ಸಂವಾದ ನಡೆಸಲು ಮತ್ತು ರಾಜ್ಯದಲ್ಲಿ ಡಿಜಿಟಲ್ ಅಸ್ತಿತ್ವವನ್ನು ಬಲಪಡಿಸಲು, ಭಾರತೀಯ ಜನತಾ ಪಕ್ಷದ (BJP) ಇತರ ಎಲ್ಲಾ ಪಕ್ಷಗಳಿಗಿಂತ ಮುಂದಿದೆ. ಸಾಮಾಜಿಕ ಜಾಲತಾಣದ(Social Media) ಮೂಲಕ ಹೊಸ ಕ್ರಾಂತಿ ಮಾಡಿರುವ ಬಿಜೆಪಿ ಇದೀಗ ಮೈಕ್ರೋ ಬ್ಲಾಗಿಂಗ್ ಪ್ಲಾಫಾರ್ಮ್ ಕೂನಲ್ಲೂ(Koo App) ಸಕ್ರಿಯವಾಗಿದೆ. ಇದೀಗ ಕರ್ನಾಟಕ ಬಿಜೆಪಿ ಕನ್ನಡಿಗರ(Karnataka) ಜೊತೆ ಕನ್ನಡದಲ್ಲೇ(Kannada) ಸಂವಾದ ನಡೆಸಲು ಕೂನಲ್ಲಿ ತನ್ನ ಖಾತೆ ತೆರಿದಿದೆ.

Follow Us:
Download App:
  • android
  • ios