ಪುಲ್ವಾಮಾ ದಾಳಿಗೆ ಪ್ರತಿದಾಳಿ: ಮಾಸ್ಟರ್ ಮೈಂಡ್ ರಶೀದ್ ಮಟಾಶ್
ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಘಾಜಿ ರಶೀದ್ ಹತ್ಯೆ| ಪುಲ್ವಾಮಾದ ಪಿಂಗ್ಲಾನ್ ಪ್ರದೇಶದಲ್ಲಿ ಎನ್ಕೌಂಟರ್| ಉಗ್ರರನ್ನ ಹತ್ಯೆ ಮಾಡಿರುವ ಬಗ್ಗೆ ಭಾರತೀಯ ಸೇನೆಯಿಂದ ಮಾಹಿತಿ
ಪುಲ್ವಾಮಾ[ಫೆ.18]: ಪುಲ್ವಾಮಾದಲ್ಲಿ ಉಗ್ರರ ವಿರುದ್ಧ ಯೋಧರು ಆರಂಭಿಸಿದ್ದ ಸುದೀರ್ಘ ಕಾರ್ಯಾಚರಣೆ ಕೊನೆಗೂ ಕೊನೆಗೊಂಡಿದ್ದು ದಾಳಿಯ ಮಾಸ್ಟರ್ ಮೈಂಡ್ ಘಾಜಿ ರಶೀದ್ ಸೇರಿದಂತೆ ಇಬ್ಬರು ಉಗ್ರರನ್ನು ಕೊಲ್ಲಲಾಗಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ ಉಗ್ರರು ಅಡಗಿದ್ದರೆನ್ನಲಾದ ಒಂದು ಕಟ್ಟಡವನ್ನೇ ಯೋಧರು ಧ್ವಂಸಗೊಳಿಸಿದ್ದಾರೆ.
"
ಪುಲ್ವಾಮಾದಲ್ಲಿ ಮತ್ತೆ ಗುಂಡಿನ ದಾಳಿ: ನಾಲ್ವರು ಯೋಧರು ಹುತಾತ್ಮ
ಪುಲ್ವಾಮಾದ ಪಿಂಗಲಾನ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಪಡೆದಿದ್ದ ಯೋಧರು, ರಾತ್ರಿ ಸುಮಾರು 12 ಗಂಟೆಗೆ ಆ ಪ್ರದೇಶವನ್ನು ಸುತ್ತುವರೆದು ಕಾರ್ಯಾಚರಣೆ ಆರಂಭಿಸಿದ್ದರು. ಇದನ್ನರಿತ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದರು. ಈ ದಾಳಿಯಲ್ಲಿ ಸೇನಾ ಮೇಜರ್ ಸೇರಿದಂತೆ ಒಟ್ಟು 4 ಮಂದಿ ಯೋಧರು ಹುತಾತ್ಮರಾಗಿದ್ದು, ಓರ್ವ ನಾಗರಿಕ ಸಾವನ್ನಪ್ಪಿದ್ದರು.
ತಮ್ಮ ಕಾರ್ಯಾಚರಣೆ ಮುಂದುವರೆಸಿದ ಯೋಧರು ಉಗ್ರರು ಅಡಗಿಕೊಂಡಿದ್ದಾರೆನ್ನಲಾದ ಕಟ್ಟಡವನ್ನು ಧ್ವಂಸಗೊಳಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಇಬ್ಬರು ಉಗ್ರರು ಕಾಮ್ರಾನ್ ಹಾಗೂ ಪುಲ್ವಾನಾ ದಾಳಿಯ ರೂವಾರಿ ಘಾಜಿ ರಶೀದ್ ಎಂಬುವುದು ಸೇನಾ ಮೂಲಗಳಿಂದ ಖಚಿತಗೊಂಡಿದೆ.
ಯಾರು ಈ ರಶೀದ್ ಘಾಜಿ?
ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಘಾಜಿ ರಶೀದ್ ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಆಜರ್ ಮಸೂದ್ ಬಲಗೈ ಬಂಟ. ಕುಪ್ವಾರಾ ಮೂಲಕ ಭಾರತದೊಳಕ್ಕೆ ನುಸುಳಿದ್ದ ಈ ಆಫ್ಗನ್ ಉಗ್ರ ಆತ್ಮಹತ್ಯಾ ದಾಳಿಯಲ್ಲಿ ಹತಾನಾದ ಅದಿಲ್‌ಗೆ ತರಬೇತಿ ನೀಡಿದ್ದ. ಫೆ.11ಕ್ಕೆ ಭಾರತೀಯ ಸೇನೆ ನಡೆಸಿದ್ದ ಎನ್ಕೌಂಟರ್ನಲ್ಲಿ ತಪ್ಪಿಸಿಕೊಂಡಿದ್ದ.
ಇದಕ್ಕೂ ಮೊದಲು ಅಫ್ಜಲ್ ಗುರು ಗಲ್ಲಿಗೇರಿಸಿದ ದಿನವೇ ದಾಳಿಗೆ ಯತ್ನಿಸಿ ವಿಫಲನಾಗಿದ್ದ ಆದರೆ ಶೀಘ್ರವೇ ಮತ್ತಷ್ಟು ದಾಳಿ ನಡೆಸಲು ಈತ ಸಂಚು ರೂಪಿಸಿದ್ದ. ಐಇಡಿ ಸ್ಪೆಷಲಿಸ್ಟ್ ಆಗಿದ್ದ ರಶೀದ್ ಪಿಂಗ್ಲಾನದಲ್ಲಿ ತಲೆಮರೆಸಿಕೊಂಡಿದ್ದ.
ಯೋಧರು ಹಾಗೂ ಉಗ್ರರ ನಡುವಿನ ಈ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದಯೋಧರು ಭಾರತೀಯ ಸೇನೆಯ 55 ರಾಷ್ಟ್ರೀಯ ರೈಫಲ್ಸ್ ಪಡೆಗೆ ಸೇರಿದವರಾಗಿದ್ದಾರೆ.
ಪುಲ್ವಾಮಾ ದಾಳಿಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪುಲ್ವಾಮಾ ದಾಳಿ