ನವದೆಹಲಿ(ಫೆ.26): ಪುಲ್ವಾಮಾ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಇದೀಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣದ ಮೇಲೆ ಭಾರತೀಯ ವಾಯುಸೇನೆ ಬಾಂಬ್ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ತುರ್ತು ಸಭೆ ನಡೆಸಿದ್ದಾರೆ. 

ಇದನ್ನೂ ಓದಿ: ಪಾಕ್ ಮೇಲೆ ಬಾಂಬ್ ದಾಳಿ - ಕಾರವಾರ ನೌಕಾನೆಲೆಯಲ್ಲಿ ಹೈ-ಅಲರ್ಟ್!

ಸಭೆಯಲ್ಲಿ ಭಾರತೀಯ ವಾಯುಸೇನೆ ನಡೆಸಿದ ದಾಳಿ ಕುರಿತು ಮಾಹಿತಿ ನೀಡಲಾಯಿತು.  ಮೋದಿ ತುರ್ತು ಸಭೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್, ಹಣಕಾಸು ಮಂತ್ರಿ ಅರುಣ್ ಜೇಟ್ಲಿ, ವಿದೇಶಾಂಗ ಸಚಿವ ಸುಶ್ಮಾ ಸ್ವರಾಜ್, ರಾಷ್ಟ್ರೀಯ ಭದ್ರತಾ ಸಲಹಗಾರ ಅಜಿತ್ ದೋವಲ್ ಹಾಗೂ ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ಉಗ್ರರ 350ಕೆಜಿ ಬಾಂಬ್ ಗೆ, ಭಾರತದ 1000 ಕೆಜಿ ಬಾಂಬ್‌ ನಿಂದ ಉತ್ತರ!

ನಮ್ಮ ದಾಳಿ 100% ಯಶಸ್ವಿಯಾಗಿದೆ. ಪ್ಲಾನ್ ಪ್ರಕಾರ ದಾಳಿ ನಡೆಸಿದ್ದೇವೆ. 10 ಅಡಗುತಾಣಗಳನ್ನ ಧ್ವಂಸಗೊಳಿಸುವಲ್ಲಿ ವಾಯುಸೇನೆ ಯಶಸ್ವಿಯಾಗಿದೆ. ಯಶಸ್ವಿ ಕಾರ್ಯಚರಣೆ ನಡೆಸಿ ವಾಯುಸೇನೆ ಮರಳಿದೆ ಎಂದು ತುರ್ತು ಸಭೆ ಬಳಿಕ ಭದ್ರತಾ ಮೂಲಗಳು ಹೇಳಿದೆ.