ವೇಶ್ಯಾವಾಟಿಕೆಗೆ ಕಾನೂನಿನ ಬದ್ಧತೆ..?

First Published 14, Jul 2018, 7:58 AM IST
Prostitution Is Now Punishable Offence Says DCM Parameshwar
Highlights

ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ ವಿಷಯ ದೇಶಾದ್ಯಂತ ಚರ್ಚೆ ಆಗಿ ಸಹಮತ ಬಂದರೆ, ಮುಂದೆ ನೋಡೋಣ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ. 

ತುಮಕೂರು: ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್‌ ಹೆಗ್ಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್‌, ಅದು ಅವರ ಅಭಿಪ್ರಾಯ. ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ವೇಶ್ಯಾವಾಟಿಕೆಗೆ ಸಂಬಂಧಿಸಿದಂತೆ ದೇಶದಲ್ಲಿ ಶಿಕ್ಷಾರ್ಹ ಕಾನೂನು ಇದೆ. ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ ವಿಷಯ ದೇಶಾದ್ಯಂತ ಚರ್ಚೆ ಆಗಿ ಸಹಮತ ಬಂದರೆ, ಮುಂದೆ ನೋಡೋಣ ಎಂದರು.

ಆರ್ಥಿಕ ಶಿಸ್ತಿನ ಅಡಿಯಲ್ಲೇ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ತಿಳಿಸಿದರು. ಶುಕ್ರವಾರ ಸಂಜೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಗತಿ ಪರ ಸರ್ಕಾರ ರೈತರ ನೆರವಿಗೆ ಬರಬೇಕಾಗುತ್ತದೆ.

ಸಾಲ ಮನ್ನಾ ಮಾಡುವ ಸರ್ಕಾರಗಳು ಆರ್ಥಿಕ ಸಂಕಷ್ಟಎದುರಿಸಬೇಕಾಗುತ್ತದೆ ಎಂಬ ಆರ್‌ಬಿಐ ಹೇಳಿಕೆ ನಿಜ. ಆದಕಾರಣ ನಾವು ಆರ್ಥಿಕ ಶಿಸ್ತಿನಡಿಯಲ್ಲೇ ಸಾಲ ಮನ್ನಾ ಮಾಡಿದ್ದೇವೆ. ಸಾಲ ಮನ್ನಾದಿಂದ ಆರ್ಥಿಕ ವ್ಯವಸ್ಥೆ ಸ್ವಲ್ಪ ಏರು ಪೇರಾಗಬಹುದಷ್ಟೇ ಎಂದರು.

loader