ಕರ್ನಾಟಕ ಪೊಲೀಸ್ ವ್ಯವಸ್ಥೆಯನ್ನು ಕೊಂಡಾಡಿದ ಪ್ರೋ.ಕೆ.ಎಸ್. ಭಗವಾನ್..!

ಬೆಂಗಳೂರು[ಜೂ.12]: ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಬಂಧಿಸಿರು ಎಸ್ ಐಟಿ ತಂಡಕ್ಕೆ ಪ್ರೋ. ಕೆ.ಎಸ್. ಭಗವಾನ್ ಅಭಿನಂದನೆ ಸಲ್ಲಿಸಿದ್ದಾರೆ. ಗೌರಿ ಹತ್ಯೆ ತನಿಖೆ ನಡೆಸುತ್ತಿದ್ದ ಎಸ್ ಐಟಿ ತಂಡದ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿತ್ತು ಎಂದಿರುವ ಅವರು, ಕರ್ನಾಟಕ ರಾಜ್ಯ ಪೊಲೀಸ್ ದೇಶದಲ್ಲಿಯೇ ಮಾದರಿ ಪೊಲೀಸ್ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ಗೌರಿ ಹಂತಕರು ಸೆರೆಯಾಗಿರುವುದು ಸಂತಸ ತಂದಿದೆ ಎಂದಿರುವ ಭಗವಾನ್, ದಾಬೋಲ್ಕರ್, ಪನ್ಸಾರೆ ಮತ್ತು ಎಂ.ಎಂ ಕಲಬುರ್ಗಿ ಹಂತಕರ ಸುಳಿವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಪ್ರೋ.ಕೆ.ಎಸ್. ಭಗವಾನ್ ಸುವರ್ಣ ನ್ಯೂಸ್ ಜೊತೆಗೆ ನಡೆಸಿದ ಎಕ್ಸಕ್ಲೂಸಿವ್ ಚಿಟ್ ಚಾಟ್ ಇಲ್ಲಿದೆ..

Comments 0
Add Comment