Asianet Suvarna News Asianet Suvarna News

ಸೋನಿಯಾ ಆ್ಯಂಡ್ ‘ಸನ್ ಆಫ್ ಇಟಾಲಿಯನ್ ಲೇಡಿ’: ಮೈಕಲ್ ಉದ್ಘಾರ!

ವಿಚಾರಣೆ ವೇಳೆ ಸೋನಿಯಾ ಗಾಂಧಿ ಹೆಸರು ಉಲ್ಲೇಖಿಸಿದ ಕ್ರಿಶ್ಚಿಯನ್ ಮೈಕಲ್| ಕ್ರಿಶ್ಚಿಯನ್ ಮೈಕಲ್  ಅಗಸ್ತಾ ವೆಸ್ಟ್ ಲ್ಯಾಂಡ್ ಹಗರಣದ ಮಧ್ಯವರ್ತಿ| ‘ಸನ್ ಆಫ್ ಇಡಾಲಿಯನ್ ಲೇಡಿ’ ಎಂದಷ್ಟೇ ಉದ್ಘರಿಸಿದ ಮೈಕಲ್| ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು| R ಎಂಬ ವ್ಯಕ್ತಿ ಯಾರು ಎಂಬುದರ ಕುರಿತು ತನಿಖೆ ನಡೆಸಬೇಕಿದೆ
 

Probe Agency Says Christian Michel Named Sonia Gandhi, 'Son Of Italian Lady
Author
Bengaluru, First Published Dec 29, 2018, 4:33 PM IST
  • Facebook
  • Twitter
  • Whatsapp

ನವದೆಹಲಿ(ಡಿ.29): ಅಗಸ್ತಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರನ್ನು ಪ್ರಸ್ತಾಪಿಸಿದ್ದಾಗಿ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಿಚಾರಣೆ ವೇಳೆ ಮೈಕಲ್ ಸೋನಿಯಾ ಗಾಂಧಿ ಹೆಸರನ್ನು ನೇರವಾಗಿ ಪ್ರಸ್ತಾಪಸಿದ್ದಾನೆ ಎನ್ನಲಾಗಿದ್ದು, ‘ಸನ್ ಆಫ್ ಇಟಾಲಿಯನ್ ಲೇಡಿ’ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕುರಿತೂ ಪರೋಕ್ಷ ಉಲ್ಲೇಖ ಮಾಡಿದ್ದಾನೆ ಎಂದು ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ ಮತ್ತು ಒಪ್ಪಂದದಲ್ಲಿ ಭಾಗಿಯಾಗಿದ್ದ ವ್ಯಕ್ತಿಗಳ ನಡುವೆ 'R' ಎಂಬ ಹೆಸರು ಹಲವು ಬಾರಿ ಪ್ರಸ್ತಾಪವಾಗಿದ್ದು, ಈ 'R' ಯಾರು ಎಂಬ ಕುರಿತು ತನಿಖೆ ನಡೆಸುವ ಅವಶ್ಯಕತೆ ಇದೆ ಎಂದೂ ಅಧಿಕಾರಿಗಳು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

Follow Us:
Download App:
  • android
  • ios