ಬೀದರ್ (ಜ.30): ಬೀದರ್'ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಬೀದರ್'ನಲ್ಲಿ ​​ ಎಬಿವಿಪಿ, ಎಸ್ಎಫ್ಐ ಸೇರಿ ವಿವಿಧ ಹಿಂದೂಪರ ಸಂಘಟನೆಗಳು ಬಂದ್'ಗೆ ಕರೆ ನೀಡಿದೆ.  

ಬಂದ್​​ ವೇಳೆ ಪ್ರತಿಭಟನೆ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಮುಂಜಾಗೃತಾ ಕ್ರಮವಾಗಿ ಜಿಲ್ಲಾ ಪೊಲೀಸರು ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಶಾಲಾ ಕಾಲೇಜುಗಳಿಗೆ ರಜೆ ಇಲ್ಲ.  ಎಂದಿನಂತೆ ಬಸ್ ಸಂಚಾರವಿದೆ.  ಜಿಲ್ಲಾಡಳಿತದಿಂದ ಸಾಂಕೇತಿಕ ಬಂದ್'ಗೆ ಸೂಚನೆ ನೀಡಲಾಗಿದೆ.  

ಬೀದಿ ವ್ಯಾಪಾರಿಗಳು, ಆಟೋ ಸಂಚಾರ ಬಂದ್ ಆಗಿದೆ. ​ ಬಲವಂತದಿಂದ ಬಂದ್​ ಮಾಡಲು ಪ್ರತಿಭಟನಾಕಾರರು ಮುಂದಾಗಿದ್ದಾರೆ.  ಬೈಕ್ ರ್ಯಾಲಿ ಮೂಲಕ ಬೀದಿ ಬೀದಿ ಓಡಾಡಿ ಪ್ರತಿಭಟನೆ ನಡೆಸಲಾಗಿದೆ.