Asianet Suvarna News Asianet Suvarna News

ಕಾರು ಅಪಘಾತ : ಪವಾಡ ರೀತಿ ಬ್ರಿಟನ್‌ ರಾಜ ಪಾರು

 ಬ್ರಿಟನ್‌ ರಾಣಿ ಎಲಿಜಬೆತ್‌ - 2 ಅವರ ಪತಿ ರಾಜ ಫಿಲಿಪ್‌ ಅವರು ಪವಾಡ ಸದೃಶ ರೀತಿಯಲ್ಲಿ ಕಾರು ಅಪಘಾತದಿಂದ ಪಾರಾಗಿದ್ದಾರೆ.

Prince Philip involved in car crash near Sandringham Estate
Author
Bengaluru, First Published Jan 19, 2019, 11:10 AM IST

ಲಂಡನ್‌: ಬ್ರಿಟನ್‌ ರಾಣಿ ಎಲಿಜಬೆತ್‌ - 2 ಅವರ ಪತಿ ರಾಜ ಫಿಲಿಪ್‌ ಅವರು ಪವಾಡ ಸದೃಶ ರೀತಿಯಲ್ಲಿ ಕಾರು ಅಪಘಾತದಿಂದ ಪಾರಾಗಿದ್ದಾರೆ.

97 ವರ್ಷದ ಫಿಲಿಪ್‌ ಅವರು ತಮ್ಮ ಲ್ಯಾಂಡ್‌ ರೋವರ್‌ ಕಾರಿನಲ್ಲಿ ತೆರಳುತ್ತಿದ್ದಾಗ ಮತ್ತೊಂದು ಕಾರಿನ ನಡುವೆ ಡಿಕ್ಕಿಯಿಂದ ಈ ದುರಂತ ಸಂಭವಿಸಿದ್ದು, ಫಿಲಿಪ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ, ಗುರುವಾರ ಸಂಭವಿಸಿದ ಈ ಅಪಘಾತದಲ್ಲಿ ಫಿಲಿಪ್‌ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ. ರಸ್ತೆ ಅಪಘಾತವಾಗಿರುವ ಸ್ಥಳದಲ್ಲಿ ಟಾಟಾ ಕಂಪನಿಯ ಐಷಾರಾಮಿ ಕಾರು ಲ್ಯಾಂಡ್‌ ರೋವರ್‌ ಸಂಪೂರ್ಣ ಜಖಂ ಆಗಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ.

Follow Us:
Download App:
  • android
  • ios