Asianet Suvarna News Asianet Suvarna News

ಅರ್ಜೆಂಟೀನಾಕ್ಕೆ ಮೋದಿ: ಜಿ-20 ಶೃಂಗದಲ್ಲಿ ಭಾಗಿ

ಅರ್ಜೆಂಟೀನಾಕ್ಕೆ ಮೋದಿ; ಜಿ-20 ಶೃಂಗದಲ್ಲಿ ಭಾಗಿ | ಜಾಗತಿಕ ಸಮಸ್ಯೆಗಳ ಬಗ್ಗೆ ಡೊನಾಲ್ಡ್ ಟ್ರಂಪ್ ಜೊತೆ ಚರ್ಚೆ 

Prime Minister Narendra Modi reaches Argentina to attend 13 th G-20 summit
Author
Bengaluru, First Published Nov 30, 2018, 11:28 AM IST
  • Facebook
  • Twitter
  • Whatsapp

ಬ್ಯೂನಸ್‌ ಐರಿಸ್‌ (ನ. 30):  ಇಂದು ಹಾಗೂ ನಾಳೆ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅರ್ಜೆಂಟೀನಾದ ರಾಜಧಾನಿ ಬ್ಯೂನಸ್‌ ಐರಿಸ್‌ಗೆ ಗುರುವಾರ ಆಗಮಿಸಿದ್ದಾರೆ.  

ಮುಂಬರುವ ದಶಕಗಳಲ್ಲಿ ಎದುರಾಗುವ ಸವಾಲುಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ ವಿಶ್ವದ ಪ್ರಮುಖ ನಾಯಕರ ಜೊತೆ ಮೋದಿ ಚರ್ಚೆ ನಡೆಸಲಿದ್ದಾರೆ. 2 ದಿನಗಳ ಅವಧಿಯಲ್ಲಿ ಮೋದಿ ಅವರು ಹಲವಾರು ದ್ವಿಪಕ್ಷೀಯ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.

ಇದೇ ವೇಳೆ ಅಮೆರಿಕ ಅಧ್ಯಕ್ಷ ಟ್ರಂಪ್‌, ಜಪಾನ್‌ ಪ್ರಧಾನಿ ಶಿಂಜೋ ಅಬೆ ಜೊತೆಗೆ ತ್ರಿಪಕ್ಷೀಯ ಸಭೆ ನಡೆಸಲಿದ್ದಾರೆ. ಚೀನಾ ದೇಶವು ಇಂಡೋ- ಪೆಸಿಫಿಕ್‌ ಪ್ರದೇಶದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿರುವ ಸಂದರ್ಭದಲ್ಲೇ ಈ ಸಭೆ ನಡೆಯುತ್ತಿರುವುದು ಮಹತ್ವ ಪಡೆದುಕೊಂಡಿದೆ.

Follow Us:
Download App:
  • android
  • ios