ಅಗತ್ಯ ವಸ್ತುಗಳ ಬೆಲೆ ಇಳಿಕೆ :ಚಿಲ್ಲರೆ ಹಣದುಬ್ಬರ ಶೇ.4.28ಕ್ಕೆ ಕುಸಿತ

First Published 12, Apr 2018, 11:36 PM IST
Price decreased of required commodities
Highlights

ಆಹಾರ ಪದಾರ್ಥಗಳು, ತರಕಾರಿ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗದೇ ಇರುವುದರಿಂದ ಚಿಲ್ಲರೆ ಹಣದುಬ್ಬರ ಇಳಿಮುಖವಾಗಿದೆ. ಕಳೆದ ಐದು ತಿಂಗಳಲ್ಲೇ ಮಾಚ್‌ರ್‍ ತಿಂಗಳ ವೇಳೆ ಚಿಲ್ಲರೆ ಹಣದುಬ್ಬರ ಶೇ.4.28ಕ್ಕೆ ಕುಸಿತವಾಗಿದೆ ಎಂದು ಸರ್ಕಾರ ತಿಳಿಸಿದೆ.

ನವದೆಹಲಿ: ಆಹಾರ ಪದಾರ್ಥಗಳು, ತರಕಾರಿ ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳು ಏರಿಕೆಯಾಗದೇ ಇರುವುದರಿಂದ ಚಿಲ್ಲರೆ ಹಣದುಬ್ಬರ ಇಳಿಮುಖವಾಗಿದೆ. ಕಳೆದ ಐದು ತಿಂಗಳಲ್ಲೇ ಮಾಚ್‌ರ್‍ ತಿಂಗಳ ವೇಳೆ ಚಿಲ್ಲರೆ ಹಣದುಬ್ಬರ ಶೇ.4.28ಕ್ಕೆ ಕುಸಿತವಾಗಿದೆ ಎಂದು ಸರ್ಕಾರ ತಿಳಿಸಿದೆ.

ಕಳೆದ ತಿಂಗಳು ಚಿಲ್ಲರೆ ಹಣದುಬ್ಬರ ಶೇ.4.44ರಷ್ಟಿತ್ತು. ಈ ಮೂಲಕ ಗ್ರಾಹಕ ದರ ಸೂಚ್ಯಂಕ ಇಳಿಮುಖವಾಗಿದೆಯಾದರೂ, ಹಣದುಬ್ಬರವನ್ನು ಶೇ.4ಕ್ಕೆ ಇಳಿಸಬೇಕೆಂಬ ಮಧ್ಯಮ ಅವಧಿಯ ಗುರಿಯನ್ನು ತಲುಪಲು ಆರ್‌ಬಿಐ ವಿಫಲವಾಗಿದೆ. ಗ್ರಾಹಕರ ದರ ಸೂಚ್ಯಂಕ(ಸಿಪಿಐ) ಆಧಾರದ ಮೇಲೆ ಹಣದುಬ್ಬರ ಇಳಿಮುಖವಾಗಿದೆ.

ಆದರೆ, ಕಳೆದ ವರ್ಷದ ಮಾರ್ಚ್ ಹಣದುಬ್ಬರ ಶೇ.3.89ರಷ್ಟಿತ್ತು. ಅಲ್ಲದೆ, ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಗ್ರಾಹಕರ ಹಣದುಬ್ಬರವು ಶೇ.3.58ರಷ್ಟುದಾಖಲಾಗಿತ್ತು.

loader