Asianet Suvarna News

ಸ್ಯಾಲರಿ ಬಹಿರಂಗ ಪಡಿಸಿದ ರಾಷ್ಟ್ರಪತಿ, ಇಂದೇ IPL ಭಾಗ-2 ವೇಳಾಪಟ್ಟಿ; ಜೂ.28ರ ಟಾಪ್ 10 ಸುದ್ದಿ!

ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ವೇತನ ಬಹಿರಂಗ ಪಡಿಸಿದ್ದಾರೆ. ಇದರ ಜೊತೆ ತಾವು ಪಾವತಿಸುವ ತೆರಿಗೆ ಕೂಡ ಬಹಿರಂಗಪಡಿಸಿದ್ದಾರೆ. ಇತ್ತ ಕಾಂಗ್ರೆಸ್ ನಾಯಕ, ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರಿಗೆ ಗೌರವ ಸೂಚಿಸಲು ಕಾಂಗ್ರೆಸ್ ಮರೆತಿದೆ. ಇಂದೇ ಐಪಿಎಲ್‌ ಭಾಗ-2 ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ. 32 ಕೋಟಿ ಮೈಲಿಗಲ್ಲು ದಾಟಿಕ ಲಸಿಕೆ, ಮತ್ತೆರಡು ಡ್ರೋನ್ ಪತ್ತೆ ಸೇರಿದಂತೆ ಜೂನ್ 28ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

President Ram nath Kovind to IPL 2 schedule top 10 news of June 28 ckm
Author
Bengaluru, First Published Jun 28, 2021, 5:26 PM IST
  • Facebook
  • Twitter
  • Whatsapp

ತಿಂಗಳ 5 ಲಕ್ಷ ರೂ ವೇತನದಲ್ಲಿ ಅರ್ಧ ತೆರಿಗೆ ಕಟ್ಟುತ್ತೇನೆ; ಹಾಸ್ಯದ ಮೂಲಕ ರಾಷ್ಟ್ರಪತಿ TAX ಜಾಗೃತಿ!...

ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಹುಟ್ಟೂರಿಗೆ ತೆರಳಿ ಬಾಲ್ಯದ ಜೀವನವನ್ನು ನೆನಪಿಸಿದ್ದಾರೆ. ಇದರ ಜೊತೆಗೆ ಹುಟ್ಟೂರಿನ ಜನರ ಜೊತೆ ಮಾತನಾಡಿದ್ದಾರೆ. ರಾಷ್ಟ್ರಪತಿಯಾದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರಿಗೆ ತೆರಳಿದ ರಾಮಾನಾಥ್ ಕೋವಿಂದ್, ಜನರಲ್ಲಿ ತೆರಿಗೆ ಮಹತ್ವವನ್ನು ಹಾಸ್ಯದ ಮೂಲಕ ವಿವರಿಸಿದ್ದಾರೆ. ಇದೇ ವೇಳೆ ತಮ್ಮ ವೇತನವನ್ನೂ ಬಹಿರಂಗಪಡಿಸಿದ್ದಾರೆ.

ಲಸಿಕೆ ಅಭಿಯಾನ: ಅಮೆರಿಕಾ ಹಿಂದಿಕ್ಕಿದ ಭಾರತ, 32 ಕೋಟಿಗೂ ಅಧಿಕ ಮಂದಿಗೆ ಲಸಿಕೆ!...

ಭಾರತ ಕೊರೋನಾ ಲಸಿಕಾ ಅಭಿಯಾನದಲ್ಲಿ ವಿಶ್ವದ ಇತರ ಟಾಪ್‌ ದೇಶಗಳನ್ನು ಹಿಂದಿಕ್ಕಿದೆ. ಭಾರತದಲ್ಲಿ ಈವರೆಗೆ 32ಕ ಕೋಟಿಗೂ ಅಧಿಕ ಜನರಿಗೆ ಲಸಿಕೆ ಹಾಕಲಾಗಿದೆ. ಭಾರತದಲ್ಲಿ ಈವರೆಗೆ 32,36,63,297 ಮಂದಿಗೆ ಕೊರೋನಾ ಲಸಿಕೆ ಹಾಕಕಲಾಗಿದ್ದು, ಇದು ವಿಶ್ವದಲ್ಲೇ ಅತೀ ಹೆಚ್ಚು.

ಜಮ್ಮು ಕಾಶ್ಮೀರದಲ್ಲಿ ಮತ್ತೆರಡು ಡ್ರೋನ್ ಪತ್ತೆ: ಸೇನೆಯಿಂದ ಗುಂಡಿನ ದಾಳಿ!...

 ಜಮ್ಮುವಿನ ಐಎಎಫ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ನಡೆದ ಬಾಂಬ್ ದಾಳಿ ಬೆನ್ನಲ್ಲೇ ಮತ್ತೆರಡು ಡ್ರೋನ್‌ಗಳು ಈ ಪ್ರದೇಶದಲ್ಲಿ ಕಂಡು ಬಂದಿದ್ದು, ಭಾರೀ ಆತಂಕ ಸೃಷ್ಟಿಸಿವೆ. ಡ್ರೋನ್‌ಗಳು ಪತ್ತೆಯಾದ ಬೆನ್ನಲ್ಲೇ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದ್ದು, ಡ್ರೋನ್‌ಗಳನ್ನು ಹೊಡೆದಟ್ಟಿಸಿವೆ.

ಕೊರೋನಾ ಸಂಕಷ್ಟದ ಮಧ್ಯೆ ಭಾರತ-ಜಪಾನ್ ಮೈತ್ರಿಗೆ ಒತ್ತು ಕೊಟ್ಟ ಮೋದಿ!...

ಕೊರೋನಾ ಸಂಕಷ್ಟದ ಮಧ್ಯೆ ಭಾರತ ಹಾಗೂ ಜಪಾನ್‌ ಸ್ನೇಹ ಹಾಗೂ ಪಾಲುದಾರಿಕೆ ಜಾಗತಿಕ ಸ್ಥಿರತೆ ಮತ್ತು ಅಭಿವೃದ್ಧಿಗೆ ಹೆಚ್ಚು ಮಹತ್ವದ್ದು ಎಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಭಯ ದೇಶಗಳ ನಡುವಿನ ಸಂಬಂಧ ಮನ್ನಷ್ಟು ಬಲಪಡಿಸುವಂತೆ ಕರೆ ನೀಡಿದ್ದಾರೆ. 

ಇಂದೇ ಐಪಿಎಲ್‌ ಭಾಗ-2 ವೇಳಾಪಟ್ಟಿ ಪ್ರಕಟ?...

14ನೇ ಆವೃತ್ತಿಯ ಐಪಿಎಲ್‌ ಭಾಗ-2ರ ವೇಳಾಪಟ್ಟಿ ಸೋಮವಾರ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಬಿಸಿಸಿಐ ಈಗಾಗಲೇ ಟೂರ್ನಿಯನ್ನು ಯುಎಇನಲ್ಲಿ ನಡೆಸುವುದಾಗಿ ಘೋಷಿಸಿದ್ದು, ಸೆಪ್ಟೆಂಬರ್ 17ರಿಂದ ಅಕ್ಟೋಬರ್ 10ರ ವರೆಗೂ ಟೂರ್ನಿ ನಡೆಯುವುದು ಬಹುತೇಕ ಖಚಿತವೆನಿಸಿದೆ. 

ಕುಡಿದ ಮತ್ತಲ್ಲಿ ಶಾರುಖ್ ಖಾನ್ ಕಾಜೋಲ್ ಜೊತೆ ಹೀಗೆ ನೆಡೆದು ಕೊಂಡಿದ್ದರಂತೆ!...

ಬಾಲಿವುಡ್‌ನ ಕಿಂಗ್ ಆಫ್ ರೋಮ್ಯಾನ್ಸ್ ಶಾರುಖ್ ಖಾನ್ ಚಿತ್ರರಂಗದಲ್ಲಿ 29 ವರ್ಷಗಳನ್ನು ಪೂರೈಸಿದ್ದಾರೆ. ರಿಷಿ ಕಪೂರ್ ಮತ್ತು ದಿವ್ಯಾ ಭಾರತಿ ಜೊತೆ ದಿವಾನಾ ಚಿತ್ರದ ಮೂಲಕ ಬಾಲಿವುಡ್ ಬಣ್ಣದ ಜಗತ್ತಿಗೆ ಕಾಲಿಟ್ಟರು. ಅವರು ಈ ಉದ್ಯಮದಲ್ಲಿ 29 ವರ್ಷಗಳನ್ನು ಪೂರೈಸಿದ್ದರೂ, ಇದುವರೆಗೂ ಅವರ ಚೊಚ್ಚಲ ಚಿತ್ರವನ್ನು ನೋಡಿಲ್ಲವಂತೆ. ಈ ನಡುವೆ ಶಾರುಖ್‌ಗೆ ಸಂಬಂಧಿಸಿದ ಒಂದು ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 

ಸರ್ಕಾರಿ ಸಂಸ್ಥೆಗಳು ಬಳಸುವ Wickr ಮೆಸೆಜಿಂಗ್ ಆ್ಯಪ್ ಖರೀದಿಸಿದ ಅಮೆಜಾನ್...

ಅಮೆರಿಕದಲ್ಲಿ ಸರ್ಕಾರಿ ಸಂಸ್ಥೆಗಳು, ಸೇನೆಗಳೇ ಹೆಚ್ಚಾಗಿ ಬಳಸುವ Wickr ಆ್ಯಪ್ ಅನ್ನು ಇ ಕಾಮರ್ಸ್ ದೈತ್ಯ ಅಮೆಜಾನ್ ಖರೀದಿಸಿದೆ. ಆ ಮೂಲಕ ಕಂಪನಿ ತನ್ನದೇ ಸ್ವಂತ ಮೆಸೆಜಿಂಗ್ ಆ್ಯಪ್ ಅನ್ನು ಹೊಂದಿಂತಾಗಿದೆ. ಎಷ್ಟು ಮೊತ್ತದ ಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂಬ ಮಾಹಿತಿಯನ್ನು ಅಮೆಜಾನ್ ನೀಡಿಲ್ಲ. 

ಭಾರತೀಯ ಮಾರುಕಟ್ಟೆಗೆ HOP Leo, HOP Lyf ಸ್ಕೂಟರ್‌ಗಳು ಬಿಡುಗಡೆ ...

ಎಚ್ಒಪಿ ಎಲೆಕ್ಟ್ರಿಕ್ ಮೊಬಿಲಿಟಿ ಲಿಯೋ ಮತ್ತು ಲೈಫ್ ಎಂಬೆರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಾಂಚ್ ಮಾಡಿದೆ. ಪ್ರಸಕ್ತ ಹಣಕಾಸು ವರ್ಷಾಂತ್ಯಕ್ಕೆ ಒಟ್ಟು 5 ಎಲೆಕ್ಟ್ರಿಕ್ ವಾಹನಗಳನ್ನು ಲಾಂಚ್ ಮಾಡುವ ಯೋಜನೆಯನ್ನು ಕಂಪನಿ ಹಾಕಿಗೊಂಡಿದ್ದು, ಈ ಪೈಕಿ ಒಂದು ಎಲೆಕ್ಟ್ರಿಕ್ ಮೋಟರ್‌ಸೈಕಲ್ ಕೂ ಇರಲಿದೆ.  

ಉಪೇಂದ್ರ, ಸುದೀಪ್ ನಟನೆಯ ಕಬ್ಜ ಪೋಸ್ಟರ್ ವೈರಲ್!...

ಆರ್ ಚಂದ್ರು ನಿರ್ದೇಶನದ ಉಪೇಂದ್ರ ಹಾಗೂ ಸುದೀಪ್ ನಟನೆಯ ಕಬ್ಜ ಚಿತ್ರ ಮತ್ತೊಮ್ಮೆ ಗಮನ ಸಳೆದಿದೆ. ಈ ಬಾರಿ ಚಿತ್ರದ ಇಬ್ಬರು ನಾಯಕರ ಪೋಸ್ಟರ್ ಸಾಕಷ್ಟು ಸದ್ದು ಮಾಡುತ್ತಿದೆ. 

ಮತ್ತೆ ಪಿವಿ ನರಸಿಂಹರಾವ್‌ ಕಡೆಗಣಿಸಿದ ಕಾಂಗ್ರೆಸ್; 100ನೇ ಜಯಂತಿಗೆ ರಾಹುಲ್ ಗಾಂಧಿ ಮೌನ!...

 ಪಿವಿ ನರಸಿಂಹ ರಾವ್ ಅವರನ್ನು ಕಾಂಗ್ರೆಸ್ ಕಡೆಗಣಿಸುತ್ತಲೇ ಬಂದಿದೆ ಅನ್ನೋ ಆರೋಪ ಹಿಂದಿನಿಂದಲೂ ಇದೆ. ಇದೀಗ ಮತ್ತೆ ಈ ಮಾತು ಸಾಬೀತಾಗಿದೆ. ಕಾರಣ ಲಸಿಕೆ, ಸೇರಿದಂತೆ ಪ್ರತಿ ವಿಚಾರಕ್ಕೆ ಟ್ವಿಟರ್ ಮೂಲಕ ಅಬ್ಬರಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇಂದು ದಿವಗಂತ ಪಿವಿ ನರಸಿಂಹ ರಾವ್ ಅವರ 100ನೇ ಜಯಂತಿ ಇದ್ದರೂ ಒಂದೇ ಒಂದು ಟ್ವೀಟ್ ಮಾಡಿಲ್ಲ. 

Follow Us:
Download App:
  • android
  • ios