ಮಂಗಳೂರು-ಉಡುಪಿಯಲ್ಲಿ ವರುಣನ ಅರ್ಭಟ; ಜನಜೀವನ ಅಸ್ತವ್ಯಸ್ತ

ಮಾನ್ಸೂನ್ ಪೂರ್ವ ಮಳೆಯಿಂದಾಗಿ ಮಂಗಳೂರು, ಉಡುಪಿಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಂಗಳೂರು ಭಾಗಶ: ಮುಳುಗಡೆಯಾಗಿದೆ. ಇನ್ನೊಂದೆಡೆ ‘ಮೆಕುನು‘ ಚಂಡಮಾರುತದ ಪರಿಣಾಮವಾಗಿ ಮರಗಳು ಧರೆಗುಳಿದಿವೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.   

Comments 0
Add Comment