ಬೆಂಗಳೂರು (ನ. 05): ಸದಾ ಏನಾದರೊಂದು ವಿವಾದ ಹುಟ್ಟು ಹಾಕುವ ಪ್ರಕಾಶ್ ರೈ ಈಗ ಮತ್ತೊಮ್ಮೆ ವಿವಾದದ ಹೇಳಿಕೆ ಕೊಟ್ಟಿದ್ದಾರೆ. ಶಬರಿಮಲೆ ಅಯ್ಯಪ್ಪ ದೇವರೇ ಅಲ್ಲ. ಮಹಿಳೆಯರನ್ನು ನೋಡದ ದೇವರು ದೇವರೇ ಅಲ್ಲ ಎಂದಿದ್ದಾರೆ. 

ಹೆಣ್ಣು ಅಂದ್ರೆ ತಾಯಿ, ಮಮತಾಮಯಿ, ಕ್ಷಮಯಾಧರಿತ್ರಿ ಎನ್ನುತ್ತೇವೆ. ಭೂಮಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ.ಆದ್ರೆ ಹೆಣ್ಣನ್ನು ಪೂಜೆಯಿಂದ ಹೊರಗಿಡೋದು ಅಂದ್ರೆ ಏನರ್ಥ? ದೇವರ ದರ್ಶನಕ್ಕೆ ಸ್ತ್ರೀಯರನ್ನು ಬಿಡದ ಭಕ್ತರು ಭಕ್ತರೇ ಅಲ್ಲ ಎಂದು ಪ್ರಕಾಶ್ ರೈ ಹೇಳಿದ್ದಾರೆ. 

ನನಗೆ ಶಬರಿಮಲೆಗೆ ಹೋಗಿ ಪೂಜಿಸಲು ಆಸಕ್ತಿಯೇ ಇಲ್ಲ. ಮಹಿಳೆಯರನ್ನು ಹತ್ತಿರ ಸೇರಿಸದ ದೇವರನ್ನು ನೋಡಲು ನನಗೆ ಇಷ್ಟವಿಲ್ಲ.  ಮಹಿಳೆಯರಿಗೆ ದರ್ಶನ ಕೊಡದ ಅಯ್ಯಪ್ಪ ದೇವರೆಂದೇ ಅನಿಸುವುದಿಲ್ಲ.  ಮಹಿಳೆಯನ್ನು ಪ್ರಾರ್ಥಿಸಲು ಬಿಡದ ಧರ್ಮ ಧರ್ಮವೇ ಅಲ್ಲ. ಶಬರಿಮಲೆಯಲ್ಲಿ ಮಹಿಳೆಯರನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಗಲ್ಫ್ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಪ್ರಕಾಶ್ ರೈ ಹೇಳಿದ್ದಾರೆ.