ನವದೆಹಲಿ[ಡಿ.12]: ಪಂಚರಾಜ್ಯ ಚುನಾವಣೆಯಲ್ಲಿ ನೋಟಾ ಮತಗಳು ಆಪ್‌, ಸಮಾಜವಾದಿ ಪಕ್ಷ ಸೇರಿದಂತೆ ಹಲವು ಪಕ್ಷಗನ್ನು ಹಿಂದಿಕ್ಕಿದೆ. 

ಆಮ್‌ ಆದ್ಮಿ ಪಕ್ಷ ಛತ್ತೀಸಗಢದಲ್ಲಿ 85 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದು, ಶೇ.0.9 ಮತಗಳನ್ನು ಪಡೆದಿದೆ. ಆದರೆ, ನೋಟಾಕ್ಕೆ ಶೇ.2.1ರಷ್ಟುಮತಗಳು ಬಂದಿವೆ. ಅದೇ ರೀತಿ ಮಧ್ಯಪ್ರದೇಶದಲ್ಲಿ ನೋಟಾಕ್ಕೆ ಶೇ.1.5ರಷ್ಟು ಮತಗಳು ಬಿದ್ದಿವೆ. ಆದರೆ, ಸಿಪಿಎಂ ಹಾಗೂ ಎಸ್‌ಪಿ ಪಕ್ಷಗಳು ಶೇ.0.7ರಷ್ಟು ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿದೆ. ರಾಜಸ್ಥಾನದಲ್ಲಿ ಶೇ.1.3ರಷ್ಟು ಹಾಗೂ ತೆಲಂಗಾಣದಲ್ಲಿ ಶೇ.1.1ರಷ್ಟು ನೋಟಾ ಚಲಾವಣೆ ಆಗಿದೆ.

ಪಂಚ ಫಲಿತಾಂಶ: ಯಾರ್ಯಾರಿಗೆ ಎಷ್ಟೆಷ್ಟು?..ಸಂಪೂರ್ಣ ವಿವರ

ರಾಜಸ್ಥಾನದ 19ರ ಪೈಕಿ 13 ಸಚಿವರಿಗೆ ಸೋಲು

ಈ ಬಾರಿ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿಯ 19 ಸಚಿವರ ಪೈಕಿ 13 ಸಚಿವರು ಸೋಲನ್ನಪ್ಪಿದ್ದಾರೆ. ಸಿಎಂ ವಸುಂಧರಾ ರಾಜೇ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ರಾಜೇ ಗೆಲುವಿನ ಅಂತರ 60896 ಇದ್ದರೆ, ಈ ಬಾರಿ ಅದು 34980ಕ್ಕೆ ಇಳಿದಿದೆ.

'ಕೈ'ನಿಂದ 5 ಬಾರಿ ಸಿಎಂ: 2 ಕ್ಷೇತ್ರದಲ್ಲೂ ಸೋಲಿಸಿದ ಮತದಾರ!