ಮಾಂಸದೂಟಕ್ಕೆ ಮುಗಿಬಿದ್ದ ರಾಜಕಾರಣಿಗಳು! ಯಾಕೆ ಗೊತ್ತಾ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 14, Aug 2018, 1:01 PM IST
Politicians crave for having non-veg before Shravana Masa
Highlights

ಶ್ರಾವಣ ಮಾಸ ಹತ್ತಿರ ಬರುತ್ತಿದ್ದಂತೆ ರಾಜಕಾರಣಿಗಳು ಮಾಂಸದೂಟಕ್ಕೆ ಮುಗಿ ಬಿದ್ದಿದ್ದಾರೆ. ಶ್ರಾವಣ ಮಾಸದಲ್ಲಿ ಮಾಂಸದೂಟ ಮಾಡಲು ಸಾಧ್ಯವಾಗುವುದಿಲ್ಲವೆಂದು ಈಗಲೇ 3 ಹೊತ್ತು ತಿನ್ನೋಕೆ ಶುರು ಮಾಡಿದ್ದಾರೆ. 

ನವದೆಹಲಿ (ಆ. 14):  ಶ್ರಾವಣ ಮಾಸ ಹತ್ತಿರ ಬರುತ್ತಿದ್ದಂತೆ ಕಳೆದ ವಾರ ದಿಲ್ಲಿಗೆ ಬಂದಿದ್ದ ರಾಜಕಾರಣಿಗಳು ಮಾಂಸದೂಟಕ್ಕೆ ಗಂಟುಬಿದ್ದಿದ್ದರು. ಕರ್ನಾಟಕ ಭವನ, ಆಂಧ್ರಭವನ, ಹೊಸ ಮಹಾರಾಷ್ಟ್ರ ಸದನಕ್ಕೆ ಹೋಗಿ ಕೋಳಿ ಕೈಮಾ ಹೊಡೆದದ್ದೇ ಹೊಡೆದದ್ದು.

ಒಬ್ಬ ಸಂಸದರಂತೂ, ‘ಅಯ್ಯೋ ರವಿವಾರದಿಂದ ಶ್ರಾವಣ. ಮನೆಯವರು ಒಂದು ತಿಂಗಳು ಮುಟ್ಟೋಕೆ ಬಿಡೋಲ್ಲ. ಅದಕ್ಕೆ ಮೂರು ಹೊತ್ತೂ ತಿನ್ನುತ್ತಿದ್ದೇನೆ ನೋಡಿ’ ಎಂದು ಹೇಳುತ್ತಿದ್ದರು. ಸಚಿವ ರಮೇಶ್ ಜಾರಕಿಹೊಳಿ ಅವರಂತೂ ಹುಬ್ಬಳ್ಳಿಯಿಂದ ಬಂದಿದ್ದ ಕಾಂಗ್ರೆಸ್ ನಾಯಕರೊಬ್ಬರಿಗೆ, ‘ಆಗಸ್ಟ್ 10 ಕ್ಕೆ ಹುಬ್ಬಳ್ಳಿಗೆ ಬರ್ತೀನಪ್ಪ. ಜುಮ್ಮಾನ್ ಪಟೆಗಾರಿ ಹೋಟೆಲ್‌ನಲ್ಲಿ ಊಟದ ವ್ಯವಸ್ಥೆ ಮಾಡಿಸು. ಶ್ರಾವಣ ಶುರು ಆಗ್ತಾಐತಿ. ಆಮೇಲೆ ತಿನ್ನೋ ಹಂಗಿಲ್ಲ. ಮಸ್ತ್ ಕರಡು ಶೇರ್ವಾ ಮಾಡಿಸು’ ಎಂದು ಹೇಳುತ್ತಿದ್ದರು. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ  ಇಂಡಿಯಾ ಗೇಟ್  ಕ್ಲಿಕ್ ಮಾಡಿ 

loader