ಮಾವನಿಂದ ಬಿಜೆಪಿ ನಾಯಕಿ ರೇಪ್ : ಬಾಯಿ ಬಿಟ್ಟರೆ ವಿಡಿಯೋ ಲೀಕ್ ಬೆದರಿಕೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 28, Jul 2018, 1:17 PM IST
Politician alleges rape by husband father in law in Gurugrama
Highlights

ಬಿಜೆಪಿ ನಾಯಕಿಯೋರ್ವರಿಂದ ಸ್ಫೊಟಕ ಸತ್ಯವೊಂದು ಹೊರಬಿದ್ದಿದೆ. ಗಂಡ ಹಾಗೂ ಮಾವನಿಂದ ತಮ್ಮ ಮೇಲೆ ಅತ್ಯಾಚಾರ ನಡೆದಿದ್ದು, ವರದಕ್ಷಿಣೆಗಾಗಿಯೂ ಕಿರಕುಳ ನೀಡುತ್ತಿರುವುದಾಗಿ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ. 

ಗುರುಗ್ರಾಮ :  39 ವರ್ಷದ ಬಿಜೆಪಿ ನಾಯಕಿಯು ತಮ್ಮ ಮೇಲೆ  ಪತಿ ಹಾಗೂ ಮಾವನಿಂದಲೇ ಅತ್ಯಾಚಾರ ನಡೆದಿದ್ದಾಗಿ ದೂರು ದಾಖಲಿಸಿರುವ ಪ್ರಕರಣ ಗುರುಗ್ರಾಮದಲ್ಲಿ ನಡೆದಿದೆ. 

ಅಲ್ಲದೇ ವರದಕ್ಷಿಣೆಗಾಗಿ ತಮ್ಮನ್ನು ಹಿಂಸಿಸುತ್ತಿರುವುದಾಗಿಯೂ ಕೂಡ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪತಿ ಮನೆಯಲ್ಲಿ ಇಲ್ಲದ ವೇಳೆ ತಾವು ಸ್ನಾನ ಮಾಡುತ್ತಿದ್ದಾಗ ಬಾತ್ ರೂಮ್ ಗೆ ನುಗ್ಗಿದ ಮಾವ ಚಾಕು ತೋರಿಸಿ ಬೆದರಿಸಿ ಅತ್ಯಾಚಾರ ಎಸಗಿದ್ದಾಗಿ ಆಕೆ ತಿಳಿಸಿದ್ದಾರೆ. 

ಅಲ್ಲದೇ ತಾವು ಈ ವಿಚಾರವನ್ನು ಬಾಯಿ ಬಿಟ್ಟಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಗೂ ಆಶ್ಲೀಲ ಫೊಟೊಗಳನ್ನು ಹರಿಯ ಬಿಡುವುದಾಗಿ ಮಾವ ಬೆದರಿಸಿದ್ದಾಗಿ ದೂರು ನೀಡಿದ್ದಾರೆ. 

ಮಾನಕ್ಕೆ ಅಂಜಿ ಇಷ್ಟು ದಿನಗಳ ಕಾಲ ತಾವು ಈ ವಿಚಾರವನ್ನು ಬಾಯಿ ಬಿಡದೇ ಸುಮ್ಮಿನಿದ್ದೆ. ಕೊನೆಗೆ ತಮ್ಮ ಪತಿಗೆ ಈ ವಿಚಾರವನ್ನು ತಿಳಿಸಿದ್ದು, ಆದರೆ ಗಂಡ ತಮಗೆ ಹೊಡೆದು ಹಿಂಸೆ ನೀಡಿದರು. ಅಲ್ಲದೇ ಒತ್ತಾಯ ಪೂರ್ವಕವಾಗಿ ಲೈಂಗಿಕವಾಗಿ ತಮ್ಮನ್ನು ಪತಿಯು ಕೂಡ ಹಿಂಸೆಗೆ ಒಳಪಡಿಸಿದ್ದಾರೆ ಎಂದು ಈಕೆ ತಿಳಿಸಿದ್ದಾರೆ. 

loader