ಅಕ್ರಮ ಮರಳು ಸಾಗಣೆಗೆ ಪೊಲೀಸಪ್ಪನೇ ಸಾಥ್!

Police Constable Support to Sand Transport
Highlights

ಅಕ್ರಮ ಮರಳು ಸಾಗಣೆಗೆ ಪೊಲೀಸಪ್ಪನೇ ನೇತೃತ್ವ ವಹಿಸಿರುವ ಘಟನೆ ಇಲ್ಲಿನ ಚೆಕ್’ಪೋಸ್ಟ್’ನಲ್ಲಿ ನಡೆದಿದೆ. 

ಹಾಸನ‌ (ಏ. 21): ಅಕ್ರಮ ಮರಳು ಸಾಗಣೆಗೆ ಪೊಲೀಸಪ್ಪನೇ ನೇತೃತ್ವ ವಹಿಸಿರುವ ಘಟನೆ ಇಲ್ಲಿನ ಚೆಕ್’ಪೋಸ್ಟ್’ನಲ್ಲಿ ನಡೆದಿದೆ. 
ರಾತ್ರಿ ಕಾರ್ಯಾಚರಣೆ ವೇಳೆ ಬೇಲೂರು ಪೊಲೀಸ್ ಠಾಣೆ ಮುಖ್ಯಪೇದೆ ಸಿಕ್ಕಿ ಬಿದ್ದಿದ್ದಾರೆ.  ಮುಖ್ಯಪೇದೆ ಕುಮಾರ್ ಸ್ವತಃ ಲಾರಿಯಲ್ಲಿ ಕುಳಿತು ಬೇಲೂರಿಂದ ಹೊಳೆನರಸೀಪುರ ಕಡೆಗೆ ಮರಳು ಸಾಗಿಸುತ್ತಿದ್ದ.  ಚೆಕ್ ಪೋಸ್ಟ್ ನಲ್ಲಿ ತಡೆದು ಕೇಳಿದ್ರೆ ಮೇಲಾಧಿಕಾರಿಗಳಿಂದ ಅನುಮತಿ ಸಿಕ್ಕಿದೆ ಎಂದು ಸುಳ್ಳು ಹೇಳಿ ಯಾಮಾರಿಸುತ್ತಿದ್ದ.  ಕೊನೆಗೆ ಹಗರೆ ಚೆಕ್​ ಪೋಸ್ಟ್​ನಲ್ಲಿ ಬೇಲೂರು ತಹಸೀಲ್ದಾರ್ ಉಮೇಶ್ ಕೈಗೆ ಸಿಕ್ಕಿಬಿದ್ದಿದ್ದಾನೆ. 
ಕುಮಾರ್ ಮತ್ತು ಲಾರಿ ಚಾಲಕ ದೇವರಾಜು ವಿರುದ್ಧ ಬೇಲೂರು ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.  ಮರಳು ಲಾರಿ ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ. ಅಕ್ರಮ ಮರಳು ದಂಧೆಯಲ್ಲಿ ಪೊಲೀಸರ ಕೈವಾಡ ಇದೆ ಎಂಬ ಸಾರ್ವಜನಿಕ ಆರೋಪಕ್ಕೆ ಪುಷ್ಡಿ ಸಿಕ್ಕಂತಾಗಿದೆ. 

loader